ಮೋದಿಗೆ ಸಂಜೀವ್ ಭಟ್‌ರನ್ನು ನಿರಂತರ ಜೈಲಿನಲ್ಲಿಡಬೇಕಿದೆ: ಇಬ್ರಾಹಿಂ ಮಜೀದ್ ತುಂಬೆ

Prasthutha|

ಬೆಂಗಳೂರು: ಪ್ರಧಾನಿ ಮೋದಿಯವರಿಗೆ 2002ರ ನರಮೇಧದ ಉರುಳು ತಪ್ಪಿಸಬೇಕಿದ್ದರೆ ಮಾಜಿ IPS ಅಧಿಕಾರಿ ಸಂಜೀವ್ ಭಟ್‌ರನ್ನು ನಿರಂತರ ಜೈಲಿನಲ್ಲಿಡಬೇಕಾಗಿದೆ ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೀದ್ ತುಂಬೆ ಹೇಳಿದ್ದಾರೆ.

- Advertisement -

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿರು ಪೋಸ್ಟ್ ಮಾಡಿದ ಇಬ್ರಾಹಿಂ ಮಜೀದ್, ಮೋದಿಯವರನ್ನು ರಕ್ಷಿಸಲು ಸುಳ್ಳು ಕೇಸುಗಳ ಮೂಲಕ ಸಂಜೀವ್ ಭಟ್‌ರನ್ನು ದೋಷಿ ಮಾಡಿ ಜೈಲಲ್ಲೇ ಕೂಡಿಹಾಕುವ ಷಡ್ಯಂತ್ರ ನಡೆಯುತ್ತಲೇ ಇದೆ. ಅವರನ್ನು ನೇರವಾಗಿ ಎದುರಿಸುವ ಧೈರ್ಯ ಮತ್ತು ತಾಕತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಇಲ್ಲ ಎಂದು ಅಬ್ದುಲ್ ಮಜೀದ್ ಹೇಳಿದ್ದಾರೆ.



Join Whatsapp