ನವದೆಹಲಿ: ಬಿಜೆಪಿ ನಾಯಕರು ಆರಂಭಿಸಿರುವ ‘ಮೋದಿ ಕಾ ಪರಿವಾರ್’ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಮಂಗಳವಾರ ವ್ಯಂಗ್ಯವಾಡಿದ್ದಾರೆ.
‘ಹಣದುಬ್ಬರ, ನಿರುದ್ಯೋಗ, ಆರ್ಥಿಕ ಅಸ್ಥಿರತೆಗಳು ಮತ್ತು ಧ್ರುವೀಕರಣದಿಂದ ಅವರ ಆಡಳಿತದ ಕೊನೆಯ ದಶಕವು ನಿರಂತರ ಸಮಸ್ಯೆಗಳಿಂದಾಗಿ ಅವರ ಸ್ವಂತ ಕುಟುಂಬಕ್ಕೆ (ನಾಗರಿಕರಿಗೆ) ಅನ್ಯಾಯ ಕಾಲ’ ಎಂದು ಹೇಳಿದ್ದಾರೆ.
140 ಕೋಟಿ ಭಾರತೀಯರು ಪ್ರಧಾನಿ ಮೋದಿ ಅವರ ಕುಟುಂಬದ ಸದಸ್ಯರಾಗಿದ್ದರೆ, ಅವರಿಗೆ ಏಕೆ ಅನ್ಯಾಯ ಮಾಡಿದರು ಎಂದು ಪ್ರಶ್ನಿಸಿದ್ದಾರೆ.
‘ನಮ್ಮ ಆದ್ಯತೆಯು ಸಹ ನಮ್ಮ ದೇಶದ ಜನರು; ನಾವು ಹಣದುಬ್ಬರ, ನಿರುದ್ಯೋಗ, ಆರ್ಥಿಕ ಅಸ್ಥಿರತೆ ಮತ್ತು ಧ್ರುವೀಕರಣದ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ. 140 ಕೋಟಿ ಭಾರತೀಯರು ಅವರ ಕುಟುಂಬವಾಗಿದ್ದರೆ, ಅವರು ಅವರ ನಂಬಿಕೆಯನ್ನು ಏಕೆ ಮುರಿದರು? ಅವರು ಏಕೆ ಜನರಿಗೆ ಅನ್ಯಾಯ ಮಾಡಿದ್ದಾರೆ? ಕಳೆದ 10 ವರ್ಷಗಳು ಅವರ ಸ್ವಂತ ಕುಟುಂಬಕ್ಕೆ ‘ಅನ್ಯಾಯ ಕಾಲ’ ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.