ಮೋದಿ ಬಡವರನ್ನು ಬೆಳೆಸುವ ಬದಲು ಅದಾನಿಯನ್ನು ಬೆಳೆಸುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Prasthutha|

ಕಲಬುರಗಿ: ಮೋದಿ ಬಡವರನ್ನು ಬೆಳೆಸುವ ಬದಲು ಅದಾನಿಯನ್ನು ಬೆಳೆಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

- Advertisement -


ಇಂದು ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರಕಾರ ರಚನೆ ಸಮಯದಲ್ಲಿ ಅದಾನಿ ಮನೆಯಲ್ಲಿ ಸಭೆಯಾಗಿತ್ತು ಎನ್ನುವ ಅಜಿತ್ ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಅದಾನಿ ರಾಜಕಾರಣದಲ್ಲಿ ಕೈ ಹಾಕಿದ್ದಾನೆ ಅಂತ ನಾವು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದೇವೆ.ಅದಾನಿ ಒಂದು ಕಡೆ ದೇಶ ಲೂಟಿ ಮಾಡುತ್ತಿದ್ದಾನೆ, ಇನ್ನೊಂದು ಕಡೆ ತನಗೆ ಸಪೊರ್ಟ್ ಮಾಡುವ ಪಕ್ಷಕ್ಕೆ ಬೆಂಬಲಿಸುತ್ತಿದ್ದಾನೆ. ದೇಶದ 5% ಜನರಲ್ಲಿ 65% ಆಸ್ತಿ ಇದೆ. ಈ ದೇಶದ ಬಡವರ ಬಳಿ ಕೇವಲ 3% ಆಸ್ತಿ ಇದೆ. ಆದರೂ ಬಂಡವಾಳಶಾಹಿಗಳಿಗೆ ಬಂಬಲಿಸುವ ಕೆಲಸ ಮೋದಿ, ಅಮಿತ ಶಾ ಮಾಡುತ್ತಿದ್ದಾರೆ. 10-20 ಕ್ಯಾಪಿಟಲಿಸ್ಟ್ ಗೆ ಬೆಳೆಸುವ ಬದಲು ಮಧ್ಯಮ ಇಂಡಸ್ಟ್ರಿಯಲಿಸ್ಟ್ ಗೆ ಬೆಳೆಸಬೇಕಿದೆ ಎಂದರು.

ಕಾಂಗ್ರೆಸ್ ನಲ್ಲಿ ಮೀಸಲಾತಿ ಗೊಂದಲದ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ‌ಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಸಂವಿಧಾನ ಜಾರಿಗೆ ಬಂದ ಮೇಲೆ ಸುಟ್ಟು ಹಾಕಿರೋದು ಅವರೇ. ರಾಮಲೀಲಾ ಮೈದಾನದಲ್ಲಿ ಸಂವಿಧಾನ ಒಪ್ಪದೆ ಸುಟ್ಟು ಹಾಕಿರೋದು ಯಾರು? ತಿರಂಗಾ ಧ್ವಜವನ್ನು ಕೂಡ ಇವರು ಒಪ್ಪಿಲ್ಲ. ಹಿಂದಿನ ಇತಿಹಾಸ ನೀವು ಯಂಗ್ ಸ್ಟಾರ್ಸ್ ಓದಬೇಕು ಎಂದರು. ಇದೇ ವೇಳೆ ರಜಾಕಾರರ ದಾಳಿ ಸಂಧರ್ಭದಲ್ಲಿ ಖರ್ಗೆ ಕುಟುಂಬದ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಯೋಗಿ ಹೇಳಿಕೆಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ ಅದರ ಬಗ್ಗೆ ಮತ್ತೆ ಮಾತಾಡೋದಿಲ್ಲ ಎಂದರು.



Join Whatsapp