ಪ್ರಧಾನಿ ಸ್ಥಾನ ಇರೋದೇ ಜನ ಸೇವೆಗೆ, ಮೋದಿಗೆ ಈಗ ಅದು ಜ್ಞಾನೋದಯವಾಗಿದೆ: ಸಿದ್ದರಾಮಯ್ಯ

Prasthutha|

ಮೈಸೂರು: ಪ್ರಧಾನಿ, ಮುಖ್ಯಮಂತ್ರಿ ಸ್ಥಾನ ಇರೋದೇ ಜನ ಸೇವೆಗೆ, ಮೋದಿಗೆ ಈಗ ಅದು ಜ್ಞಾನೋದಯವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವುದು ಜನ ಸೇವೆಗಾಗಿ. ಅದರಲ್ಲಿ ಹೊಸದು ಏನಿದೆ? ಪ್ರಧಾನಮಂತ್ರಿ ಹುದ್ದೆ ಎನ್ನುವುದು ಜನಸೇವೆಗಾಗಿ ಎಂಬುದು ಅವರಿಗೆ ಈಗ ಜ್ಞಾನೋದಯವಾಗಿದೆ. ರಾಜಕೀಯವೇ ಜನಸೇವೆ, ಅದು ಈಗ ಪ್ರಧಾನಮಂತ್ರಿಗೆ ಅರಿವಾಗಿದೆ ಎಂದರು.


ನನಗೆ ಜನ ಸೇವೆ ಮುಖ್ಯ, ಅಧಿಕಾರ ಅಲ್ಲ ಎಂಬ ಮೋದಿ ಹೇಳಿಕೆಗೆ ಸಿದ್ದರಾಮಯ್ಯಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.



Join Whatsapp