“ಮೋದಿ ಹಟಾವೋ, ದೇಶ್ ಬಚಾವೋ” ಪೋಸ್ಟರ್: ಎಂಟು ಜನರ ಬಂಧನ

Prasthutha|

ನವದೆಹಲಿ: ಅಹ್ಮದಾಬಾದ್’ನ ವಿವಿಧ ಪ್ರದೇಶಗಳಲ್ಲಿ “ಮೋದಿ ಹಟಾವೋ, ದೇಶ್ ಬಚಾವೋ” ಪೋಸ್ಟರ್’ಗಳನ್ನು ಅಂಟಿಸಿದ್ದಕ್ಕಾಗಿ ಎಂಟು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

- Advertisement -


ಆಮ್ ಆದ್ಮಿ ಪಕ್ಷ (ಎಎಪಿ), ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರವ್ಯಾಪಿ ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಿದ ಒಂದು ದಿನದ ನಂತರ ಈ ಬಂಧನಗಳು ನಡೆದಿವೆ.
ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಹ್ಮದಾಬಾದ್ ಪೊಲೀಸರು ತಿಳಿಸಿದ್ದಾರೆ.
ಎಎಪಿಯು “ಮೋದಿ ಹಟಾವೋ, ದೇಶ್ ಬಚಾವೋ” ಅಭಿಯಾನವನ್ನು ದೇಶಾದ್ಯಂತ 11 ಭಾಷೆಗಳಲ್ಲಿ ಪ್ರಾರಂಭಿಸಿದೆ. ಇಂಗ್ಲಿಷ್, ಹಿಂದಿ ಮತ್ತು ಉರ್ದು ಜೊತೆಗೆ ಗುಜರಾತಿ, ಪಂಜಾಬಿ, ತೆಲುಗು, ಬೆಂಗಾಲಿ, ಒರಿಯಾ, ಕನ್ನಡ, ಮಲಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ.


ಕಳೆದ ವಾರ, ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಸಾವಿರಾರು ಇಂತಹ ಪೋಸ್ಟರ್’ಗಳು ಗೋಡೆಗಳ ಮೇಲೆ ಕಾಣಿಸಿಕೊಂಡವು. ಇದರ ವಿರುದ್ಧ ಪೊಲೀಸ್ ದಮನಕಾರಿ ನೀತಿ ಅನುಸರಿಸಿತ್ತು. ಪೋಸ್ಟರ್ ಹಾಕಿದವರ ವಿರುದ್ಧ 49 ಎಫ್ಐಆರ್’ಗಳನ್ನು ದಾಖಲಿಸಲಾಗಿದೆ ಮತ್ತು ಆರು ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಮುದ್ರಣಾಲಯವನ್ನು ಹೊಂದಿದ್ದರು.



Join Whatsapp