ಮುಸ್ಲಿಮರ ನಿಜವಾದ ಸ್ಥಾನವನ್ನು ಮೋದಿ ತೋರಿಸಿದ್ದಾರೆ: ಅಸದುದ್ದೀನ್ ಉವೈಸಿ

Prasthutha|

ಕಲಬುರಗಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ರಾಜಕೀಯದಲ್ಲಿ ಮುಸ್ಲಿಮರ ಸ್ಥಾನ ಎಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸದುದ್ದೀನ್ ಉವೈಸಿ ಹೇಳಿದ್ದಾರೆ. ರಾಮ ಮಂದಿರ ಉದ್ಘಾಟನೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

- Advertisement -

ಈ ಬಗ್ಗೆ ಸುದೀರ್ಘವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಉವೈಸಿ, 500 ವರ್ಷಗಳಿಂದ ಅಲ್ಲಿ ಮಸೀದಿಯೊಂದು ಇತ್ತು. ನರೇಂದ್ರ ಮೋದಿಯವರು ರಾಮ ಮಂದಿರ ನಿರ್ಮಾಣ ಮೂಲಕ ದೊಡ್ಡ ಮೊತ್ತದ ಮತವನ್ನು ಕ್ರೋಢೀಕರಿಸುವ ಗುರಿ ಹೊಂದಿದ್ದಾರೆ. ಚುನಾವಣಾ ಲಾಭಕ್ಕಾಗಿ ಬಹುಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳನ್ನು ಗೆಲ್ಲುವಲ್ಲಿ ವಿರೋಧ ಪಕ್ಷಗಳು ಬಿಜೆಪಿಗಿಂತ ಭಿನ್ನವಾಗಿಲ್ಲ ಎಂದಿದ್ದಾರೆ. ದೆಹಲಿಯಲ್ಲಿ ಹನುಮಾನ್ ಚಾಲೀಸಾ ಮತ್ತು ರಾಮ್ ಧುನ್ನಂತಹ ಧಾರ್ಮಿಕ ಗೀತೆಗಳನ್ನು ವಾರಕ್ಕೊಮ್ಮೆ ಸರ್ಕಾರಿ ಶಾಲೆಗಳಲ್ಲಿ ಹಾಡಬೇಕು ಎಂದು ಎಎಪಿ ಸರ್ಕಾರ ಸೂಚಿಸಿದೆ ಎಂದು ಉದಾಹರಣೆ ನೀಡಿದ್ದಾರೆ.

ಕಾಂಗ್ರೆಸ್‌ನ ಜಿ.ಬಿ ಪಂತ್ ಮುಖ್ಯಮಂತ್ರಿ ಆಗಿದ್ದಾಗ ರಾಜ್ ಕೆ ಅಂಧೇರಿಯಲ್ಲಿ ರಾಮನ ಮೂರ್ತಿ ಇಡಲಾಗಿತ್ತು. ಅವರು ಅಲ್ಲಿಂದ ಮೂರ್ತಿಯನ್ನು ತೆಗೆಯಲಿಲ್ಲ. ಆಗ ಅಲ್ಲಿನ ಕಲೆಕ್ಟರ್ ನಾಯರ್ ಸಾಬ್ ಮಸೀದಿ ಬಂದ್ ಮಾಡಿ ಪೂಜೆ ಶುರು ಮಾಡಿದ್ದರು ಎಂದಿದ್ದಾರೆ.

- Advertisement -

ಅಲ್ಲಿಯೇ ನಮ್ಮ ಮಸೀದಿ ಇತ್ತು. 1986ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಮಸೀದಿಗ ಬೀಗ ತೆರೆದು ಹಿಂದೂಗಳಿಗೆ ಪೂಜೆ ಆರಂಭಿಸಲು ಅವಕಾಶ ನೀಡಲಾಯಿತು. ಮೂರನೇ ಪ್ರಮುಖ ಬೆಳವಣಿಗೆಯಾಗಿ ಬಿಜೆಪಿ ನಾಯಕರು ಗುಂಪು ಗುಂಪಾಗಿ ಮಸೀದಿಯನ್ನು ಧ್ವಂಸಗೊಳಿಸಿದರು ಎಂದ ಉವೈಸಿ, ಈ ವಿಚಾರವನ್ನು ಮೋದಿ ಹೈಜಾಕ್ ಮಾಡಿರುವ ಕಾರಣದಿಂದಲೇ ವಿಪಕ್ಷ ನಾಯಕರು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎಂದರು.

ಅದನ್ನು ಹೊರತುಪಡಿಸಿದರೆ ಮಸೀದಿ ಸ್ಥಳದಲ್ಲಿ ಮಂದಿರವನ್ನು ಹೇಗೆ ನಿರ್ಮಿಸಲಾಯಿತು ಎಂಬ ಸೈದ್ಧಾಂತಿಕ ವಿರೋಧದಿಂದಲ್ಲ. ಮೋದಿ ಇಲ್ಲದಿದ್ದರೆ ನಾವೂ ಹೋಗುತ್ತಿದ್ದೆವು ಎಂದು ಎಲ್ಲರೂ ಹೇಳುತ್ತಿದ್ದಾರೆ, ಆದರೆ ನಾನು ಹೇಳಿದ ವಿಚಾರಗಳ ಬಗ್ಗೆ ಯಾರೂ ಏನೂ ಹೇಳುತ್ತಿಲ್ಲ .ಏಕೆಂದರೆ ಎಲ್ಲರೂ ಬಹುಸಂಖ್ಯಾತ ಸಮುದಾಯದ ಮತಗಳಿಗಾಗಿ ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಜಿ.ಬಿ.ಪಂತ್ ರಾಮನ ಮೂರ್ತಿ ತೆಗೆದಿದ್ದರೆ ಈ ದಿನವನ್ನು ನೋಡಬೇಕಿತ್ತೇ? 1986ರಲ್ಲಿ ಬೀಗ ತೆರೆಯದಿದ್ದರೆ ಈ ದಿನ ಬರುತ್ತಿತ್ತೇ?, ಡಿ.6ರಂದು ಬಾಬರಿ ಮಸೀದಿ ಧ್ವಂಸ ಮಾಡದಿದ್ದರೆ ಈ ರೀತಿ ಬರುತ್ತಿತ್ತೇ? ಇವೆಲ್ಲವೂ ನನ್ನ ಪ್ರಶ್ನೆಗಳು, ಆದರೆ ಯಾರೂ ಯಾವುದೇ ಉತ್ತರವನ್ನು ನೀಡುತ್ತಿಲ್ಲ ಎಂದು ಅಸದುದ್ದೀನ್ ಉವೈಸಿ ಹೇಳಿದರು.



Join Whatsapp