ಮೋದಿ ಜಾಹೀರಾತಿಗಾಗಿ ಸರ್ಕಾರಿ ಖಜಾನೆಯಿಂದ 1,698.89 ಕೋಟಿ ರೂ ಖರ್ಚು

Prasthutha|

ನವದೆಹಲಿ: 2018 – 2021 ರ ಸಾಲಿನ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ಪ್ರಚಾರಕ್ಕಾಗಿ ಮುದ್ರಣ ಮತ್ತು ಮಾಧ್ಯಮಗಳಲ್ಲಿನ ಜಾಹೀರಾತಿಗಳಿಗಾಗಿ 1,698.89 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

- Advertisement -

ಕಲಾಪದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಎಐಯುಡಿಎಫ್ ಸಂಸದ ಬದ್ರುದ್ದೀನ್ ಅಜ್ಮಲ್ ಅವರ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.

ಸರ್ಕಾರದ ನೀತಿಗಳು ಮತ್ತು ಯೋಜನೆಗಳನ್ನು ದೂರದ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಮತ್ತು ಫಲಾನುಭವಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಹೊರಾಂಗಣ ಮಾಧ್ಯಮಗಳಲ್ಲಿನ ಜಾಹೀರಾತು ನೀಡಿದೆ ಎಂದು ಠಾಕೂರು ತಿಳಿಸಿದರು.

- Advertisement -

ಕೇಂದ್ರ ಸರ್ಕಾರ ಪತ್ರಿಕಾ ಜಾಹೀರಾತುಗಳಿಗಾಗಿ ಒಟ್ಟು 826.5 ಕೋಟಿ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಜಾಹೀರಾತಿಗಾಗಿ ಒಟ್ಟು 193.52 ಕೋಟಿ ಖರ್ಚು ಮಾಡಿರುವುದು ಅಂಕಿಅಂಶಗಳಿಂದ ಬಹಿರಂಗವಾಗಿದೆ. ಪ್ರಧಾನಿ ವೈಯಕ್ತಿಕ ಬ್ರಾಂಡ್ ಅನ್ನು ವೃದ್ಧಿಸುವ ಉದ್ದೇಶದ ಜಾಹೀರಾತಿಗಾಗಿ ಮೋದಿ ಸರ್ಕಾರ ಹೆಚ್ಚಿನ ಪ್ರಮಾಣದ ತೆರಿಗೆಯ ಹಣವನ್ನು ವ್ಯಯಿಸಿದೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತಿತ್ತು.

ಕಳೆದ ವರ್ಷ ಮೋದಿ ಸರ್ಕಾರ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಹೋರ್ಡಿಂಗ್ಗಳಲ್ಲಿ ಜಾಹೀರಾತುಗಳ ಮೂಲಕ ಪ್ರಚಾರಕ್ಕಾಗಿ ಸುಮಾರು 713.20 ಕೋಟಿ ತೆರಿಗೆದಾರರ ಹಣವನ್ನು ಖರ್ಚು ಮಾಡಿದೆ ಎಂದು ಆರ್ಟಿಐ ಆಘಾತಕಾರಿ ವರದಿಯನ್ನು ಬಹಿರಂಗಪಡಿಸಿತ್ತು.

2014, ಜೂನ್ ರಲ್ಲಿ ಬಿಜೆಪಿ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರ ಮೋದಿ ಸರ್ಕಾರವು ಮಾಧ್ಯಮಗಳಲ್ಲಿ ಜಾಹೀರಾತು ಮತ್ತು ಪ್ರಚಾರಕ್ಕಾಗಿ 4,343.26 ಕೋಟಿ ರೂ.ಗಳನ್ನು ಖರ್ಚಿಮಾಡಿದೆ ಎಂದು 2018 ರ ಮೇನಲ್ಲಿ ಆರ್.ಟಿ.ಐ ನಿಂದ ಬಹಿರಂಗವಾಗಿತ್ತು.



Join Whatsapp