ಮೋದಿ ಪ್ರಧಾನಿಯಾಗಿ ಮುಂದುವರೆಯುವುದು ಅಸಾಧ್ಯ: ಉದ್ಧವ್ ಠಾಕ್ರೆ

Prasthutha|

ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲಿದ್ದು, ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಇಬ್ಭಾಗ ಆಗಲಿದ್ದು, ಮೋದಿ ಪ್ರಧಾನಿಯಾಗಿ ಮುಂದುವರೆಯುವುದು ಅಸಾಧ್ಯ ಎಂದು ಶಿವಸೇನೆ(ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

- Advertisement -

ನಾಸಿಕ್​ ನಲ್ಲಿ ರಾಜಾಭಾವು ವಾಜೆ ಪರ ಪ್ರಚಾರ ಮಾಡಿದ ಠಾಕ್ರೆ ಮೋದಿ ಬಗ್ಗೆ ವಾಗ್ದಾಳಿ ನಡೆಸಿ, ನಮ್ಮ ಪಕ್ಷವು ಕಾಂಗ್ರೆಸ್‌ನೊಂದಿಗೆ ವಿಲೀನವಾಗಲಿದೆ ನೀವು ಹೇಳುತ್ತಿದ್ದೀರಿ, ಆದರೆ 30 ವರ್ಷಗಳಿಂದ ನಾವು ಬಿಜೆಪಿಯೊಂದಿಗೆ ಇದ್ದರೂ ವಿಲೀನವಾಗಲಿಲ್ಲ, ಜೂನ್​ 5ರ ಬಳಿಕ ನೀವು ಮಾಜಿ ಪ್ರಧಾನಿಯಾಗುತ್ತೀರಿ ಇದು ಜನರ ನಿರ್ಧಾರ ಎಂದಿದ್ದಾರೆ.



Join Whatsapp