ಮೋದಿ ಫೋಟೋ ಬಳಸದೆ ಮಗನ ಪರ ಪ್ರಚಾರ ಮಾಡುವಂತೆ ಯಡಿಯೂರಪ್ಪಗೆ ಸವಾಲು ಹಾಕುತ್ತೇನೆ: ಈಶ್ವರಪ್ಪ

Prasthutha|

- Advertisement -

ಶಿವಮೊಗ್ಗ: ಮೋದಿ ಫೋಟೋ ಬಳಸದಂತೆ ತಡೆಯಲು ಅವರು ಯಾರು? ಅವರೊಬ್ಬ ವಿಶ್ವನಾಯಕ ಮತ್ತು ಅವರನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ, ತನ್ನನ್ನು ಯಾರೂ ತಡೆಯಲಾರರು ಎಂದು ಈಶ್ವರಪ್ಪ ಹೇಳಿದರು.

ನಗರದಲ್ಲಿ ಇಂದು ಸುದ್ದಿಗೋಷ್ಟಿಯೊದನ್ನು ನಡೆಸಿ ಮಾತಾಡಿದ ಅವರು, ಯಡಿಯೂರಪ್ಪನವರು ಮೋದಿ ಫೋಟೋ ಬಳಸದೆ ಶಿವಮೊಗ್ಗದಲ್ಲಿ ತಮ್ಮ ಮಗನನ್ನು ಗೆಲ್ಲಿಸುತ್ತಾರೆಯೇ? ಎಡಭಾಗದಲ್ಲಿ ವಿಜಯೇಂದ್ರ, ಬಲಭಾಗದಲ್ಲಿ ರಾಘವೇಂದ್ರ ಮತ್ತು ನಡುವೆ ತಾವಿರುವ ಫೋಟೋ ಬಳಸಿ ಚುನಾವಣಾ ಪ್ರಚಾರ ನಡೆಸುವಂತೆ ಈಶ್ವರಪ್ಪ ಮಾಜಿ ಮುಖ್ಯಮಂತ್ರಿಗೆ ಸವಾಲು ಎಸೆದರು.

- Advertisement -

ನಾಳೆ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು. ತಮ್ಮ ಬೆಂಬಲಿಗರು ಮತ್ತು ತನ್ನಂತೆ ಹಿಂದೂತ್ವವನ್ನು ಪ್ರತಿಪಾದಿಸುವವರೇ ತಮ್ಮ ಸ್ಟಾರ್ ಪ್ರಚಾರಕರು ಎಮದು ಹೇಳಿದ ಅವರು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮತ್ತು ರಾಜ್ಯ ಮಡಿವಾಳ ಸಮಾಜದ ಅಧ್ಯಕ್ಷ ತಮ್ಮೊಂದಿಗಿದ್ದು ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.

Join Whatsapp