ಇಂದು ಸಂಜೆ 6 ಗಂಟೆಗೆ ದೇಶದ ಜನತೆಯೆದುರು ಮೋದಿ । ಆತಂಕ, ಗಾಬರಿ, ಕುತೂಹಲದಲ್ಲಿ ದೇಶದ ಜನತೆ

Prasthutha|

ಇಂದು ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೋನಾ ಆರಂಭಗೊಂಡ ನಂತರ ದೇಶದ ಜನತೆ ಅನುಭವಿಸಿದ ಕಷ್ಟ ಕಾರ್ಪಣ್ಯಗಳ ಕುರಿತುಮೌನ ಪಾಲಿಸಿದ್ದ ಮತ್ತು ಆ ಕುರಿತು ಏನೊಂದು ಮಾತನಾಡದಿದ್ದ ಮೋದಿಯ ಕುರಿತು ಜನಾಕ್ರೋಶ ವ್ಯಕ್ತವಾಗಿತ್ತು. ಆದರೆ ಇದೀಗ ಹಠಾತ್ ಆಗಿ ದೇಶದ ಜನರ ಮುಂದೆ ಮಾತನಾಡಲು ಬರುತ್ತಿರುವುದು ದೇಶದ ಜನರಿಗೆ ಆತಂಕ, ಗಾಬರಿಯೊಂದಿಗೆ ಕುತೂಹಲವೂ ಮನೆ ಮಾಡಿದೆ.

- Advertisement -

ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿರುವ ಮೋದಿ, “ನಾನು ಇಂದು ಸಂಜೆ 6 ಗಂಟೆಗೆ ದೇಶದ ಜನರಿಗೆ ಸಂದೇಶ ನೀಡಲಿದ್ದೇನೆ” ಎಂದಿದ್ದಾರೆ. ಪ್ರಧಾನಿ ಮೋದಿಯ ಈ ನಡೆ ಬಿಹಾರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡಾಗಿದೆ ಎಂಬ ಮಾತುಗಳೂ ಹರಿದಾಡುತ್ತಿದೆ.

Join Whatsapp