ಬೆಂಗಳೂರು: ಬಿಜೆಪಿ ಪಕ್ಷದಲ್ಲೂ ಎಲ್ಲ ಪಕ್ಷಗಳಂತೆ ಕುಟುಂಬ ರಾಜಕಾರಣ, ರಾಕ್ಷಸ ರಾಜಕಾರಣ ಕಾಣುತ್ತಿದೆ. ಹಾಗಾಗಿ ಯಾವೊಬ್ಬ ಸಚಿವರು ಸಮಾಧಾನದಿಂದಿಲ್ಲ, ಕುಟುಂಬ ರಾಜಕಾರಣದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಅನ್ನೋ ಮೂಲಕ ವಿಧಾನ ಪರಿಷತ್ ಸದಸ್ಯ ನಾಯಕತ್ವ ಬದಲಾವಣೆ ಬಗ್ಗೆ ಮುಕ್ತವಾಗಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾಯಕತ್ವ ಬದಲಾವಣೆ ಕುರಿತು ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಯಡಿಯೂರಪ್ಪನವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಅವರು ತನ್ನ ಹಿಂದಿನ ಪ್ರಭಾವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಅವರು ಪಕ್ಷದ ಮಾರ್ಗದರ್ಶಕರಾಗಿ ಬೇರೆಯವರಿಗೆ ಅವಕಾಶ ನೀಡಲಿ ಎಂದಿದ್ದಾರೆ.
ಜನ ಸರಕಾರದ ಬಗ್ಗೆ ಹೊರಗೆ ಏನು ಮಾತಾಡುತ್ತಿದ್ದಾರೆ ಅನ್ನೋದು ಮುಖ್ಯವಾಗಿದೆ. ವಸ್ತು ಸ್ಥಿತಿ ಏನು ಅನ್ನೋದರ ಬಗ್ಗೆ ಮಾತಡಿದ್ದೀನಿ, ನನಗೆ ಮಂತ್ರಿ ಸಿಕ್ಕಿಲ್ಲ ಅನ್ನೋ ಕಾರಣಕ್ಕಾಗಿ ಯಾವುದೇ ರೀತಿಯ ಅಭಿಪ್ರಾಯ ಹಂಚಿಕೊಂಡಿಲ್ಲ. ಪಕ್ಷದ ಹಿತದೃಷ್ಟಿಯಿಂದ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ. ಯಡಿಯೂರಪ್ಪನವರಲ್ಲಿ ಎಲ್ಲರನ್ನೂ ಜೊತೆಗೂಡಿಸಿಕೊಂಡು ಪಕ್ಷವನ್ನ ಮುನ್ನಡೆಸುವ ಶಕ್ತಿ ಇಲ್ಲ ಅನ್ನೋದಾಗಿ ತಿಳಿಸಿದ್ದಾರೆ.
ಅಲ್ಲದೇ, ತಾನು ಹಂಚಿಕೊಂಡ ಅಭಿಪ್ರಾಯವನ್ನ ಪ್ರತಿಯೊಂದನ್ನು ನೋಟ್ ಮಾಡಿಕೊಂಡಿರುವ ಅರುಣ್ ಸಿಂಗ್, ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾಗಿ ಮಾಧ್ಯಮಗಳಿಗೆ MLC ವಿಶ್ವನಾಥ್ ತಿಳಿಸಿದ್ದಾರೆ.