ಕರಾವಳಿಯಲ್ಲಿ ಭಾರೀ ಮಳೆಯ ಮಧ್ಯೆ ಲಡಾಖ್ ಪ್ರವಾಸಕ್ಕೆ ಹೊರಟ ಶಾಸಕರು

Prasthutha|

ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ರೆಡ್ ಅಲರ್ಟ್ ಘೋಷಿಸಿದೆ. ಈ ಸಂದರ್ಭದಲ್ಲಿ ಅಲ್ಲಿದ್ದು ಪರಿಹಾರ ಘೋಷಿಸಬೇಕಾದ ಶಾಸಕರು ಲೇಹ್- ಲಡಾಖ್ ಗೆ ಪ್ರವಾಸಕ್ಕೆ ತೆರಳಿರುವುದು ಚರ್ಚೆಗೆ ಗ್ರಾಸವಾಗಿದೆ.

- Advertisement -

ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹ ಬಂದಿರುವಾಗಲೇ ವಿಧಾನ ಮಂಡಲದ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್ ,ಕರಾವಳಿ ಭಾಗದ ಶಾಸಕ ಹರೀಶ್ ಪೂಂಜಾ ಮತ್ತು ಬಿ.ಎಂ.ಸುಕುಮಾರ ಶೆಟ್ಟಿ ಪ್ರವಾಸಕ್ಕೆ ತೆರಳಿರುವುದು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಗುರುವಾರ ಭರವಸೆ ಸಮಿತಿಯ ಸಭೆಯ ಬಳಿಕ ಪ್ರವಾಸ ಕಾರ್ಯ ಮುಂದುವರಿಸಲಾಗುವುದು ಎಂದಿದ್ದರೂ ಸಭೆಯನ್ನೂ ನಡೆಸದೆ ಶಾಸಕರು ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

ಲೇಹ್ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿದ್ದು ಅಲ್ಲಿ ಭರವಸೆ ಸಮಿತಿ ಇದೆಯೆಂಬ ಖಚಿತ ಮಾಹಿತಿಯಿಲ್ಲ. ಅದಾಗ್ಯೂ ಶಾಸಕರು ಲಡಾಕ್ ಗೆ ಅದೇನು ಅಧ್ಯಯನ ಮಾಡಲು ತೆರಳುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಕರಾವಳಿ ಮುಕ್ಕಾಲು ಭಾಗ ಮುಳುಗಿರುವಾಗ ಆ ಬಗ್ಗೆ ಚಿಂತಿಸದ ಶಾಸಕರು ಮೋಜು ಮಸ್ತಿಗಾಗಿ ಪ್ರವಾಸ ಕೈಗೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ

Join Whatsapp