ತೀವ್ರ ನಿಗಾ ಘಟಕದಲ್ಲಿ ಶಾಸಕ ಸುರೇಶ್ ಕುಮಾರ್‌‌: ಮೆದುಳಿಗೂ ವ್ಯಾಪಿಸಿದ ಚಿಕೂನ್ ಗುನ್ಯಾ!

Prasthutha|

ಬೆಂಗಳೂರು: ಮಾಜಿ ಸಚಿವ, ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ (ಬಿಜೆಪಿ) ಶಾಸಕ ಸುರೇಶ್ ಕುಮಾರ್ ಚಿಕೂನ್ ಗುನ್ಯಾದಲ್ಲಿ ಕಾಣಿಸಿಕೊಂಡ ಹೊಸ ರೂಪದ ಕಾಯಿಲೆಗೆ ಈಡಾಗಿದ್ದು, ಅವರ ಬ್ರೈನ್ ಮತ್ತು ಸ್ಪೈನಲ್‌ ಕಾರ್ಡ್‌ನಲ್ಲಿಯೂ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

ಅಪರೂಪದ ಮ್ಯೂಟೆಂಟ್ ಚಿಕೂನ್ ಗುನ್ಯಾ ಜ್ವರದ ಲಕ್ಷಣ ಅವರಲ್ಲಿ ಕಾಣಿಸಿಕೊಂಡಿದ್ದು, ನಾಲ್ಕುೂವರೆ ಲಕ್ಷದ ನಾಲ್ಕು ಇಂಜೆಕ್ಷನ್ ಪಡೆದಿದ್ದಾರೆನ್ನಲಾಗಿದೆ. ಇನ್ನೂ ಕನಿಷ್ಠ ಒಂದು ವಾರ ಅವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುರೇಶ್ ಕುಮಾರ್ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

- Advertisement -

ಸುರೇಶ್ ಕುಮಾರ್ ಅವರ ಮೆದುಳಿಗೂ ಜ್ವರ ತಗುಲಿರುವ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮೈಸೂರು ಪಾದಯಾತ್ರೆ ನಡೆಸಿದ್ದರು. ಬಳಿಕ ತಿರುಪತಿ ಪ್ರವಾಸ ಮಾಡಿದ್ದರು. ಈ ಬಳಿಕ ಅವರಿಗೆ ಜ್ವರ ಕಾಣಿಸಿಕೊಂಡಿದೆ ಎನ್ನಲಾಗಿದೆ.ನಾಲ್ಕು ದಿನಗಳ ಹಿಂದೆ ಸುರೇಶ್ ಕುಮಾರ್‌ಗೆ ಜ್ವರ ಕಾಣಿಸಿಕೊಂಡಿತ್ತು.



Join Whatsapp