ಶಾಸಕಿ ಸೌಮ್ಯಾ ರೆಡ್ಡಿ ಕಾರು ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

Prasthutha|


ಬೆಂಗಳೂರು: ಮತದಾರರಿಗೆ ಸೀರೆ ಹಂಚಲು ತೆರಳುತ್ತಿದ್ದ ವೇಳೆ ಚುನಾವಣಾಧಿಕಾರಿಗಳು ಶಾಸಕಿ ಸೌಮ್ಯಾ ರೆಡ್ಡಿ ಕಾರು ವಶಕ್ಕೆ ಪಡೆದಿದ್ದಾರೆ.

- Advertisement -

ಬೆಂಗಳೂರಿನ ಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿರುವ ಸೌಮ್ಯ ರೆಡ್ಡಿ ಕಾರಿನಲ್ಲಿ, ಚುನಾವಣೆ ಹಿನ್ನೆಲೆ ಮಹಿಳಾ ಮತದಾರರಿಗೆ ಸೀರೆ ಹಂಚಲು ಕಾರಿನಲ್ಲಿ ಸೀರೆಗಳನ್ನು ಕೊಂಡೊಯ್ಯಲಾಗುತ್ತಿತ್ತು.

ಮಾಹಿತಿ ತಿಳಿದ ಚುನಾವಣಾಧಿಕಾರಿಗಳು ಕಾರು ತಡೆದು ತಪಾಸಣೆ ನಡೆಸಿದಾಗ ಸೀರೆಗಳು ಪತ್ತೆಯಾಗಿದ್ದು, ಕೂಡಲೇ ಕಾರನ್ನು ವಶಕ್ಕೆ ಪಡೆದು ತಿಲಕ್​ನಗರ ಪೊಲೀಸ್​ ಠಾಣೆಗೆ ರವಾನಿಸಿದ್ದಾರೆ.

- Advertisement -

ಪೊಲೀಸರು ಕಾರಿಗೆ ಕವರ್​ ಮಾಡಿ ನಿಲ್ಲಿಸಿದ್ದು, ಪ್ರಕರಣ ಕೂಡ ದಾಖಲಿಸಿದ್ದಾರೆ.

Join Whatsapp