ನಿಗಮ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ

Prasthutha|

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಹಲವು ಹಿರಿಯ ಶಾಸಕರಿಗೆ ನಿಗಮ ಮಂಡಳಿಗೆ ನೇಮಕ ಮಾಡಿ ಪಟ್ಟಿ ಬಿಡುಗಡೆಗೊಳಿಸಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಜಿಲ್ಲೆಯ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಮಗೆ ವಹಿಸಿರುವ ನಿಗಮವನ್ನು ತಿರಸ್ಕರಿಸುವ ಮೂಲಕ ಗಮನ ಸೆಳೆದಿದ್ದಾರೆ. ನಿಗಮ,ಮಂಡಳಿ ಕಾರ್ಯ ಭಾರ ಸ್ಪೀಕರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

- Advertisement -

ಕರ್ನಾಟಕ ಬೀಜ ನಿಗಮದ ಅಧ್ಯಕ್ಷರ ಹುದ್ದೆಯನ್ನು ನಿರಾಕರಿಸಿ ಮೊಬೈಲ್ ಸ್ವಿಚ್‌ಆಪ್ ಮಾಡಿಕೊಂಡ ಶಾಸಕ, ತಮ್ಮ ಆಪ್ತ ಸಹಾಯಕರ ಮೂಲಕ ಸಂದೇಶ ರವಾನಿಸಿದ್ದಾರೆ.

ತಾನು ನಿಗಮ ಮಂಡಳಿಗೆ ಆಕಾಂಕ್ಷಿ ಅಲ್ಲದ ಕಾರಣ ಕರ್ನಾಟಕ ಬೀಜ ನಿಗಮದ ಅಧ್ಯಕ್ಷರ ಹುದ್ದೆಯನ್ನು ನಿರಾಕರಿಸಿದ್ದು, ಕಾರ್ಯ ವರದಿ ಮಾಡಿಕೊಳ್ಳುವುದಿಲ್ಲ ಎಂದು ತಮ್ಮ ಅಪ್ತ ಸಹಾಯಕರಾದ ಮೋಹನ್ ಎಂಬುವರ ಮೂಲಕ ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಆಗಿರುವ ಸುಬ್ಬಾರೆಡ್ಡಿ ಸರ್ಕಾರ ವಹಿಸಿರುವ ನಿಗಮ ಮಂಡಳಿಯನ್ನು ನಿರಾಕರಿಸುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ.

- Advertisement -

ಮೂರು ಬಾರಿ ಶಾಸಕರಾಗಿರುವ ಎಸ್.ಎನ್. ಸುಬ್ಬಾರೆಡ್ಡಿ, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವ ಪ್ರಬಲ ಆಕಾಂಕ್ಷಿಯನ್ನು ಹೊಂದಿದ್ದರು. ಈ ಹಿಂದೆಯು ಕೂಡ ಅವರು ನನಗೆ ಸಚಿವ ಸ್ಥಾನ ಕೊಟ್ಟರೆ ಕೊಡಿ ಇಲ್ಲದೇ ಹೋದರೆ ನನಗೆ ಯಾವುದೇ ನಿಗಮ ಮಂಡಳಿ ಬೇಡ ಅಂತ ಕಡ್ಡಿ ಮುರಿದಂತೆ ಹೇಳಿದ್ದರು.



Join Whatsapp