ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಮಾಸ್ಕ್ ಧರಿಸಿದ್ದರೂ ಪೊಲೀಸರಿಂದ ದಂಡ | ಗೃಹ ಸಚಿವರಿಗೆ ದೂರು

Prasthutha|

ಬೆಂಗಳೂರು : ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಮಾಸ್ಕ್ ಧರಿಸಿದ್ದರೂ ಪೊಲೀಸರು ದಂಡ ವಿಧಿಸಿರುವ ಬಗ್ಗೆ ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ತುರ್ತು ಕಾರಣದಿಂದಾಗಿ ತಾವು ಶಾಸಕರ ಭವನಕ್ಕೆ ತಮ್ಮ ಕಾರು ಬಿಟ್ಟು ಬಾಡಿಗೆ ಕಾರಿನಲ್ಲಿ ತೆರಳುತ್ತಿದ್ದೆ. ಈ ವೇಳೆ ಕಾರು ತಡೆದ ಪೊಲೀಸರು ಬಲವಂತವಾಗಿ ಕಾರಿನ ಗ್ಲಾಸ್ ಇಳಿಸಿ, ಒಳಗೆ ಮಾಸ್ಕ್ ಕುಳಿತಿದ್ದರೂ, ಮಾಸ್ಕ್ ಹಾಕಿಲ್ಲ ಎಂಬುದಾಗಿ ದಂಡ ವಿಧಿಸಿದ್ದಾರೆ ಎಂದು ಅವರು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -

24-12-2020ರಂದು ಬಾಡಿಗೆ ಕಾರಿನಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ಮುಂಭಾಗ ಸಂಚಾರಿ ವ್ಯತ್ಯಯದಿಂದ ಕಾರು ನಿಲುಗಡೆಗೊಂಡಿದ್ದ ಪೊಲೀಸರು ಕಾರಿನ ಟಿಂಟ್ ಗ್ಲಾಸ್ ಕೆಳಗಿಳಿಸುವಂತೆ ಬಲವಂತ ಪಡಿಸಿದರು. ಕಾರಿನೊಳಗಿದ್ದ ನನಗೆ ಮಾಸ್ಕ್ ಹಾಕಿದ್ದರೂ, 250 ರೂ. ದಂಡ ವಿಧಿಸಿದ್ದಾರೆ. ಮಧ್ಯಾಹ್ನ 12:30 ಗಂಟೆಗೆ ಈ ಘಟನೆ ನಡೆದಿದೆ. ಜವಾಬ್ದಾರಿಯುತ ವ್ಯಕ್ತಿಯಾಗಿ ಅವರಿಗೆ ಮರು ಮಾತನಾಡದೆ ದಂಡ ಕಟ್ಟಿರುತ್ತೇನೆ. ವಿನಾಕಾರಣ ನನ್ನ ಮೇಲೆ ದಂಡ ವಿಧಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೋರಿಕೊಳ್ಳುತ್ತೇನೆ ಎಂದು ಶಾಸಕ ಕುಮಾರಸ್ವಾಮಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -