ನನ್ನ ಆತ್ಮಗೌರವಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರೋದು ನಿಜ : ಬಿ.ಆರ್ ಪಾಟೀಲ್

Prasthutha|

ಬೆಂಗಳೂರು: ನಾನು ಯಾರಿಗೂ ಕ್ಷಮೆ ಕೇಳಿಲ್ಲ, ಕ್ಷಮೆ ಕೇಳುವ ಹೇಡಿತನ ನನ್ನದಲ್ಲ. ನಾನು ಕ್ಷಮೆ ಕೇಳುವ ಯಾವ ತಪ್ಪು ಮಾಡಿಲ್ಲ. ನನ್ನ ಆತ್ಮಗೌರಕ್ಕೆ ಧಕ್ಕೆ ಆದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರುವುದು ನಿಜ ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಗುಡುಗಿದ್ದಾರೆ.

- Advertisement -

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆತ್ಮಗೌರಕ್ಕೆ ಧಕ್ಕೆಯಾದರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರೋದು ನಿಜ, ಶಾಸಕಾಂಗ ಸಭೆಯಲ್ಲಿ ನಾನು ಸಿಟ್ಟಾಗಿ ಹೊರಬಂದಿದ್ದು ನಿಜ. ನಂತರ ಸಚಿವರು ನನ್ನ ತಡೆ ಹಿಡಿದರು ಅಂತ ಹೇಳಿದ್ದಾರೆ.

Join Whatsapp