ಮಂಗಳೂರು : ಭಾರಿ ಮಳೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವಾಗ ಶಾಸಕ ಭರತ್ ಶೆಟ್ಟಿ ಕೇವಲ ಕೋಮು ಪ್ರಚೋದನೆ ಮಾಡುತ್ತಾ ಕಾಲಹರಣ ಮಾಡುವ ಬದಲು ತಮ್ಮ ಕ್ಷೇತ್ರದ ಜನರ ಸಂಕಷ್ಟದ ಮೇಲೆ ಗಮನ ಹರಿಸಬೇಕು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಉಸ್ಮಾನ್ ಗುರುಪುರ ಆಗ್ರಹಿಸಿದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟಿರುವ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದ ಗುಡ್ಡೆಯ ಜಯಜೋಗಿಯವರ ಮನೆ, ಅಣೆಬದಿ ಅಝೀಝ್ ರವರ ಮನೆ, ಬಂಗ್ಲೆಗುಡ್ಡೆ ಶಿವದಾಸ ಮತ್ತು ಇಮ್ತಿಯಾಝ್ ರವರ ಮನೆ ಕುಸಿದುಬೀಳುವ ಅಪಾಯದಲ್ಲಿದ್ದು, ಬಂಗ್ಲೆಗುಡ್ಡೆ ಗುರುಪುರ ಸಂಪರ್ಕಿಸುವ ರಸ್ತೆಯ ಬದಿ ಜರಿದು ರಸ್ತೆ ಮತ್ತು ಮನೆಗಳು ಬೀಳುವ ಭೀತಿ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಹಲವಾರು ಬಾರಿ ಮನವಿ ಕೊಟ್ಟ ನಂತರ ಶಾಸಕ ಭರತ್ ಶೆಟ್ಟಿ ಕಟಾಚಾರಕ್ಕೆ ಭೇಟಿ ನೀಡಿ ಪರಿಹಾರವನ್ನು ಕೊಡುವುದಾಗಿ ಭರವಸೆಯನ್ನು ಕೊಟ್ಟು ಯಾವುದೇ ಪರಿಹಾರವನ್ನು ನೀಡದೆ ಕೇವಲ ಕೋಮು ಪ್ರಚೋದನೆ ಮಾಡಿ ಜನರನ್ನು ಮಂಗ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಅನಾಹುತ ಆಗಿ ಜೀವಹಾನಿ ಆಗುವ ಮುನ್ನ ಎಚ್ಚೆತ್ತುಕೊಂಡು ಶೀಘ್ರವೇ ಪರಿಹಾರ ಕ್ರಮ ವಹಿಸಬೇಕೆಂದು ಶಾಸಕರು ಮತ್ತು ಸಂಬಂದಪಟ್ಟ ಅಧಿಕಾರಿಗಳಲ್ಲಿ ಅವರು ಅಗ್ರಹಿಸಿದ್ದಾರೆ.