ಬೆಂಗಳೂರು: ಶಾಸಕ ಬಿಆರ್ ಪಾಟೀಲ್ ಸೂಕ್ಷ್ಮ ಸ್ವಭಾವದವರು. ಹೀಗಾಗಿ ಎಮೋಷನಲ್ ಆಗಿ ಈ ರೀತಿ ಪತ್ರ ಬರೆದಿರಬಹುದು ಎಂದು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಶಾಸಕ ಬಿ.ಆರ್ ಪಾಟೀಲ್ ಪತ್ರ ಬರೆದಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿ.ಆರ್ ಪಾಟೀಲ್ ನಮಗೆಲ್ಲಾ ಹಿರಿಯ ನಾಯಕರು. ಅವರ ಮೇಲೆ ಅಪಾರ ಗೌರವ ನಮಗಿದೆ. ಅವರು ಸಜ್ಜನ ರಾಜಕಾರಣಿ. ತತ್ವ ಸಿದ್ದಾಂತದ ಮೇಲೆ ರಾಜಕಾರಣ ಮಾಡಿದವರು. ನಾನು ಚಿಕ್ಕವನಿಂದ ಅವರನ್ನ ನೋಡಿದ್ದೇನೆ. ಅವರ ನೋವನ್ನ ಅವರು ಹೇಳಿಕೊಂಡಿದ್ದಾರೆ. ಅವರ ಮೇಲೆ ಯಾರಾದರೂ ಆರೋಪ ಮಾಡಿದರೆ ಜನ ಒಪ್ಪಲ್ಲ ಎಂದರು.