ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಹೊಸ ಉಪಾಯ ಕಂಡು ಹಿಡಿದ ಶಾಸಕ ಅಭಯ್ ಪಾಟೀಲ್

Prasthutha|

ಬೆಳಗಾವಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಓಡಾಟದಿಂದ ಉಂಟಾಗಿರುವ  ಟ್ರಾಫಿಕ್ ಸಮಸ್ಯೆಯಿಂದಾಗಿ ಜನಸಾಮಾನ್ಯರು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಅರಿತ ಬೆಳಗಾವಿ ದಕ್ಷಿಣ ಭಾಗದ ಕ್ಷೇತ್ರ ಶಾಸಕ ಅಭಯ್ ಪಾಟೀಲ್ ಹೊಸ ಉಪಾಯ ಕಂಡುಕೊಂಡಿದ್ದು, ಅದನ್ನು ಪ್ರಾಯೋಗಿಕವಾಗಿಯೂ ಜಾರಿಗೆ ತಂದಿದ್ದಾರೆ.

- Advertisement -

ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಶಾಸಕರು ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಜಾರಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ಈ ಸ್ಕೂಟರ್ ಗಳು ಸಾರ್ವಜನಿಕರ ಬಳಕೆಗೆ ಸಿಗಲಿವೆ ಎಂದು ತಿಳಿದು ಬಂದಿದೆ.

ಮೊದಲ ಹಂತದಲ್ಲಿ 25 ಮತ್ತು ಎರಡನೇ ಹಂತದಲ್ಲಿ 25 ಎಲೆಕ್ಟ್ರಿಕ್ ಸ್ಕೂಟರ್  ಗಳನ್ನು ಪರಿಚಯಿಸಲಿದ್ದು, 40 ನಿಮಿಷಗಳ ಬಳಕೆಗೆ ನಿರ್ದಿಷ್ಟ ಮೊತ್ತವನ್ನು ಸವಾರರು ಪಾವತಿಸಬೇಕು. ಈ ಸ್ಕೂಟರ್ ಗಳು 20 ರಿಂದ 30 ಕಿಮೀ ವೇಗದಲ್ಲಿ ಓಡಿಸಬಹುದು ಎಂದು ಶಾಸಕರು ಹೇಳಿದ್ದಾರೆ.

- Advertisement -

ಶಾಸಕ ಅಭಯ್ ಪಾಟೀಲ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರಾಯೋಗಿಕವಾಗಿ ಓಡಿಸುವುದನ್ನು ವೀಡಿಯೊದಲ್ಲಿ ಕಾಣಬಹುದು.

Join Whatsapp