ಲಜ್ಜೆಗೆಟ್ಟು ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ BJP ಸರ್ಕಾರ: ಎಂ.ಕೆ ಸ್ಟಾಲಿನ್ ಆಕ್ರೋಶ

Prasthutha|

ಚೆನ್ನೈ: ಲಜ್ಜೆಗೆಟ್ಟು ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಎಲ್ಲಾ ಪ್ರಯತ್ನಗಳನ್ನು ತಡೆಯಲು ನಮ್ಮ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.

- Advertisement -

ಹಿಂದಿ ವಿರೋಧಿ ಹೋರಾಟದಲ್ಲಿ ಮಡಿದವರ ನೆನಪಿಗಾಗಿ ತಿರುವಲ್ಲೂರಿನಲ್ಲಿ ನಡೆದ ಭಾಷಾ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, 2017–20ರ ಅವಧಿಯಲ್ಲಿ ಸಂಸ್ಕೃತದ ಪ್ರಚಾರಕ್ಕೆ ಕೇಂದ್ರ ಸರ್ಕಾರ 643 ಕೋಟಿ ರೂ. ಖರ್ಚು ಮಾಡಿದೆ. ಆದರೆ ತಮಿಳು ಭಾಷೆಗೆ 23 ಕೋಟಿ ರೂ.ಗಿಂತ ಕಡಿಮೆ ಹಣ ವ್ಯಯಿಸಿದೆ. ಲಜ್ಜೆಗೆಟ್ಟು ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರ ಹಿಂದಿ ದಿನಾಚರಣೆ ಮಾಡುತ್ತಿದೆ. ಆದರೆ ಇತರೆ ಭಾಷೆಗಳಿಗೆ ಈ ಮಾನ್ಯತೆ ನೀಡುತ್ತಿಲ್ಲ. ಹಿಂದಿ ಹೇರಿಕೆ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.


ಭಾರತದ ಒಕ್ಕೂಟವನ್ನು ಆಳ್ವಿಕೆ ಮಾಡುತ್ತಿರುವ ಬಿಜೆಪಿ ಸರ್ಕಾರ ಹಿಂದಿ ಹೇರಿಕೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದೆ. ಆಡಳಿತದಿಂದ ಹಿಡಿದು ಶಿಕ್ಷಣದವರೆಗೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಹಿಂದಿಯನ್ನು ಹೇರಿಕೆಗಾಗಿಯೇ ಅವರು ಅಧಿಕಾರಕ್ಕೆ ಬಂದಂತಿದೆ. ಒಂದು ದೇಶ, ಒಂದು ಧರ್ಮ, ಒಂದು ಚುನಾವಣೆ, ಒಂದು ಪರೀಕ್ಷೆ, ಒಂದು ಆಹಾರ, ಒಂದು ಸಂಸ್ಕೃತಿ ಹೀಗೆ ಒಂದು ಭಾಷೆಯಿಂದ ಇತರ ರಾಷ್ಟ್ರೀಯ ಜನಾಂಗಗಳ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Join Whatsapp