ಮಿಝೋರಾಂ‌ ಸಿಎಂ ಮಗಳಿಂದ ವೈದ್ಯನಿಗೆ ಹಲ್ಲೆ: ಕೊನೆಗೂ ಕ್ಷಮೆ ಕೇಳಿದ ಮುಖ್ಯಮಂತ್ರಿ

Prasthutha|

ಗುಹಾತಿ: ಕ್ಲಿನಿಕ್‌ನಲ್ಲಿ ವೈದ್ಯನಿಗೆ ಹಲ್ಲೆಗೈದ ತನ್ನ ಮಗಳ ವೀಡಿಯೋ ವೈರಲ್ ಆದ ಬಳಿಕ ಇದೀಗ ಮಿಝೋರಾಂ ಮುಖ್ಯಮಂತ್ರಿ ಝೊರಾಮ್‌ತಂಗ ಸಾರ್ವಜನಿಕ ಕ್ಷಮಯಾಚನೆ ನಡೆಸಿದ್ದಾರೆ.

- Advertisement -

ಮುಖ್ಯಮಂತ್ರಿಯ ಮಗಳು ಮಿಲಾರಿ ಚಾಂಗ್ಟೆ ಇತ್ತೀಚೆಗೆ ರಾಜ್ಯರಾಜಧಾನಿ ಐಝ್ವಾಲ್‌ನಲ್ಲಿ ಚರ್ಮರೋಗತಜ್ಞರನ್ನು ಭೇಟಿಯಾಗಲು ಬಂದಿದ್ದರು. ಆದರೆ ಅಪಾಯಿಂಟ್‌ಮೆಂಟ್ ಇಲ್ಲದ ಹಿನ್ನೆಲೆಯಲ್ಲಿ ವೈದ್ಯರು ಸಮಾಲೋಚನೆ ನಡೆಸಲು ನಿರಾಕರಿಸಿದ್ದರು. ಈ ವೇಳೆ ಆಕ್ರೋಶಗೊಂಡ ಮಿಲಾರಿ ಚಾಂಗ್ಟೆ, ಬಾಗಿಲು ತಳ್ಳಿ ಒಳನುಗ್ಗಿ ವೈದ್ಯರ ಮುಖಕ್ಕೆ ಗುದ್ದಿದ್ದಳು.

ಬಳಿಕ ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಮುಖ್ಯಮಂತ್ರಿ ಮತ್ತು ಕುಟುಂಬ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಯನ್ನು ಎದುರಿಸಿತ್ತು. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA)ನ ಮಿಝೋರಾಂ ಘಟಕ ಕೂಡಾ ಘಟನೆಯನ್ನು ಖಂಡಿಸಿದ್ದು, ನಿನ್ನೆ ವೈದ್ಯರೆಲ್ಲಾ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು.

- Advertisement -

ಈ ಎಲ್ಲಾ ಬೆಳವಣಿಗೆಯ ಬಳಿಕ ಮಿಝೊರಾಂ ಮುಖ್ಯಮಂತ್ರಿ ಝೊರಾಮ್‌ತಂಗ ತನ್ನ ಅಧಿಕೃತ ಇನ್‌ಸ್ಟಗ್ರಾಂ ಖಾತೆಯಲ್ಲಿ ಕ್ಷಮೆಯಾಚಿಸಿದ್ದು, ಮಗಳ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

Join Whatsapp