ಯುವಕರು ಅಂಧಾಭಿಮಾನ, ರಾಜಕಾರಣಿಗಳ ಪ್ರಚೋದನೆಯ ಮಾತಿಗೆ ಬಲಿಯಾಗಬೇಡಿ: ಮಿಥುನ್ ರೈ ಮನವಿ

Prasthutha|

►ರಾಜಕೀಯಕ್ಕೆ ಯುವಕರು ಬೇಕು, ಅವರ ನೆತ್ತರಿನ ರಾಜಕೀಯ ಬೇಡ

- Advertisement -

ಮಂಗಳೂರು: ಯುವ ಶಕ್ತಿ ದೇಶದ ಶಕ್ತಿ, ಯುವಕರು ದೇಶಕ್ಕಾಗಿ ದುಡಿಯಲಿ. ಆದರೆ ಅಂಧಾಭಿಮಾನಕ್ಕೆ ಮತ್ತು ರಾಜಕಾರಣಿಗಳ ಪ್ರಚೋದನೆಯ ಮಾತಿಗೆ ಬಲಿಯಾಗಬೇಡಿ. ಅದರ ಬದಲು ಸಾಧ್ಯವಿರುವಷ್ಟು ಸಾಮಾಜಿಕ ಕೆಲಸ ಮಾಡಲಿ, ಜೀವ ಬಲಿದಾನವಲ್ಲ ಎಂದು ಕಾಂಗ್ರೆಸ್ ನಾಯಕ ಮಿಥುನ್ ರೈ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದಯ, ಪ್ರವೀಣ್ ಪೂಜಾರಿ ಮೊದಲಾದವರ ಹೆತ್ತವರಿಗೆ ಸಿಕ್ಕಿದ್ದು ಅವರ ಶವ ಮಾತ್ರ. ಹೆತ್ತವರು ಸಾಕಿದ ಕಷ್ಟಕ್ಕೆ ಇದು ಕೊಡುಗೆಯೇ? ರಾಜಕೀಯಕ್ಕೆ ಯುವಕರು ಬೇಕು. ಅವರ ನೆತ್ತರಿನ ರಾಜಕೀಯ ಬೇಡ. ದ್ವೇಷದ ರಾಜಕೀಯ ಮಾಡುವವರ ಮಾತಿಗೆ ಯುವಕರ ಜೀವ ಹೋಗಬಾರದು. ಚುನಾವಣೆಗೆ ಒಂಬತ್ತು ತಿಂಗಳುಗಳು ಇರುವಾಗಲೇ ಇಂತಹ ಕೊಲೆಗಳು ಯಾಕೆ ನಡೆಯುತ್ತವೆ ಎಂದು ಮಿಥುನ್ ರೈ ಪ್ರಶ್ನಿಸಿದರು.

- Advertisement -

ದಿನದೊಳಗೆ ನೆಟ್ಟಾರು ಪ್ರವೀಣ್ ಕೊಲೆಗಾರರನ್ನು ಹಿಡಿದು ಪೊಲೀಸರು ಅತಿ ಕಠಿಣ ಶಿಕ್ಷೆಯನ್ನು ಕೊಡಿಸಬೇಕು. ದೊಡ್ಡದರಿಂದ ಸಣ್ಣ ಪಕ್ಷಗಳವರೆಗೆ ಎಲ್ಲರೂ ದ್ವೇಷ ರಾಜಕಾರಣ ಬಿಟ್ಟು ಜನಪರ ರಾಜಕೀಯ ನಡೆಸಿ ಎಂದು ರೈ ಹೇಳಿದರು.

ಜನರು ಇಂತಹ ಸಂದರ್ಭಗಳಲ್ಲಿ ಜನರು ಶಾಂತಿ ಕಾಪಾಡಬೇಕು. ಜಿಲ್ಲೆಯ ಸೌಹಾರ್ದ ಪರಂಪರೆ ಉಳಿಯಬೇಕು ಎಂದರು.

ಕಾಂಗ್ರೆಸ್ ಮುಖಂಡೆ ಮಮತಾ ಗಟ್ಟಿ ಮಾತನಾಡಿ, ಮಸೂದ್ ಅಥವಾ ಪ್ರವೀಣ್ ಅವರ ಕೊಲೆಯನ್ನು ಸಮಾಜ ಒಪ್ಪುವುದಿಲ್ಲ. ಈ ಸರಕಾರದಿಂದ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಬಿಜೆಪಿ ಸರಕಾರದಡಿ ಗೂಂಡಾಗಿರಿ ಅಧಿಕವಾಗಿದೆ. ಪೊಲೀಸರು, ಆಳುವವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಮಸೂದ್, ಪ್ರವೀಣ್ ಇಬ್ಬರ ಕೊಲೆಯಲ್ಲೂ ಹರಿದದ್ದು ಕೆಂಪು ರಕ್ತ. ಅಲ್ಲಿ ಭೇದವೆಲ್ಲಿದೆ. ಬರೀ ಕುಟುಂಬದ ನೋವು ಸಮಾಜಕ್ಕೂ ಬಾಧಕ ಎಂದು ಹೇಳಿದರು.

ಹಿಂದೆ ಶಾಸಕರು ಕೊಲೆ ಮಾಡಿಸಿದ್ದು ಎಂದರು. ಈಗ ಯಾರು ಮಾಡಿಸಿದ್ದು ಎಂದು ಆಳುವವರು ಉತ್ತರಿಸಲಿ ಎಂದು ಮಮತಾ ಗಟ್ಟಿ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಪ್ಪಿ, ಶಾಂತಲಾ, ಚಂದ್ರಕಲಾ, ಅನಿಲ್, ಶುಭೋದಯ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

Join Whatsapp