ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು; ಬಿಜೆಪಿ ಮಾಡಿದ್ದ ತಪ್ಪುಗಳನ್ನು ಸರಿಪಡಿಸಲಾಗಿದೆ: ಕೆ.ಜೆ ಜಾರ್ಜ್

Prasthutha|

ಚಿಕ್ಕಮಗಳೂರು: ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು. ಬಿಜೆಪಿ ಮಾಡಿದ್ದ ಕೆಲ ದೋಷಪೂರಿತ ತಪ್ಪುಗಳನ್ನಷ್ಟೇ ಸರಿಪಡಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

- Advertisement -


ಈ ಬಗ್ಗೆ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಲವಂತ ಮತ್ತು ಆಮಿಷ ಒಡ್ಡಿ ಮತಾಂತರ ಮಾಡುವುದು ತಪ್ಪು. ಇದು ಹಳೇ ಕಾಯ್ದೆಯಲ್ಲೇ ಇದೆ’ ಎಂದು ಹೇಳಿದರು.


‘ಆರೋಪಿತರೇ ಸಾಕ್ಷಿ ಒದಗಿಬೇಕು ಎಂಬಿತ್ಯಾದಿ ದೋಷಪೂರಿತ ಸೆಕ್ಷನ್ ಗಳನ್ನು ಸೇರಿಸಲಾಗಿತ್ತು. ಅವುಗಳನ್ನು ಕೈಬಿಡಲಾಗಿದೆ. ಈ ರೀತಿ ಕಾಯ್ದೆ ತಂದು ಬಿಜೆಪಿ ಸಾಧಿಸಿದ್ದೇನು, ಎಷ್ಟು ಪ್ರಕರಣ ದಾಖಲಿಸಿದೆ’ ಎಂದು ಪ್ರಶ್ನಿಸಿದರು.



Join Whatsapp