ಕಾಣೆಯಾಗಿದ್ದ ಶಿಕ್ಷಕಿಯ ಶವ ಪತ್ತೆ: ಕೊಲೆ ಶಂಕೆ

Prasthutha|

ಮಂಡ್ಯ: ಕಾಣೆಯಾಗಿದ್ದ ಪಾಂಡವಪುರ ಮಾಣಿಕ್ಯಹಳ್ಳಿಯ ಶಿಕ್ಷಕಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

- Advertisement -


ಮೃತ ಮಹಿಳೆಯನ್ನು ದೀಪಿಕಾ (28) ಎಂದು ಗುರುತಿಸಲಾಗಿದೆ. ಅವರ ದೇಹ ಮೇಲುಕೋಟೆಯ ಬೆಟ್ಟದ ಬಳಿ ಹೂತಿಟ್ಟ ಸ್ಥಿತಿಯಲ್ಲಿ ಸಿಕ್ಕಿದೆ.


ವಿವಾಹಿತೆಯಾಗಿದ್ದ ದೀಪಿಕಾಗೆ 8-ವರ್ಷ ವಯಸ್ಸಿನ ಮಗ ಇದ್ದಾನೆ. ಕುಟುಂಬದ ಮೂಲಗಳ ಪ್ರಕಾರ ಮೃತ ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶನಿವಾರದಂದು ಶಾಲೆಗೆ ಹೋಗಿದ್ದ ದೀಪಿಕಾ ಸಂಜೆಯಾದರೂ ಮನೆಗೆ ಬಾರದೇ ಹೋದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

- Advertisement -


ಸೋಮವಾರ ಸಂಜೆ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶಿಕ್ಷಕಿಯ ಮೃತದೇಹ ಪತ್ತೆಯಾಗಿದೆ. ದೀಪಿಕಾ ಕೊಲೆಯಾಗಿರಬಹುದಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.



Join Whatsapp