ಮಡಿಕೇರಿ: ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿ ಮೃತ ದೇಹ ಪತ್ತೆ

Prasthutha|

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನಲ್ಲಿ ಕಳೆದ ಎರಡು ವಾರಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಎಎಸ್‌ಐಯ ಮೃತದೇಹ ಪತ್ತೆಯಾಗಿದೆ. ಹಾಸನ ಜಿಲ್ಲೆ ಕೊಣನೂರಿನ ಕೆರೆಯಲ್ಲಿ ಕುಶಾಲನಗರದ ಸಂಚಾರಿ ಠಾಣಾ ಎಎಸ್‌ಐ ಸುರೇಶ್‌ನ ಮೃತದೇಹ ಪತ್ತೆಯಾಗಿದೆ. ಕಳೆದ 13 ದಿನಗಳಿಂದ ಎಎಸ್‌ಐ ಸುರೇಶ್ ನಾಪತ್ತೆಯಾಗಿದ್ದರು. ಈ ಸಂಬಂಧ  ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

ಕುಶಾಲನಗರ ಸಂಚಾರಿ ಪೊಲೀಸ್ ಎಎಸ್‌ಐ ಸುರೇಶ್‌ನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿರುತ್ತು. ಇದ್ರಿಂದ ಕುಟುಂಭಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಅಷ್ಟೇ ಅಲ್ಲದೇ ಕುಶಾಲನಗರದಲ್ಲಿ ಇರುವ ಪೊಲೀಸ್ ಕ್ವಾಟ್ರಸ್ ಕೂಡ ಬೀಗ ಹಾಕಿ ಸುರೇಶ್ ತೆರಳಿದ್ದರು.

ಈ ನಿಟ್ಟಿನಲ್ಲಿ ಕುಶಾಲನಗರ ಪೊಲೀಸರು ಹಾಗೂ ಸಹೋದ್ಯೋಗಿಗಳು ಸುರೇಶ್ ಅವರ ಫೋನ್‌ನ ಟವರ್ ಲೊಕೇಶನ್ ಅನ್ನು ಪರಿಶೀಲಿಸಿದಾಗ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯಲ್ಲಿ ಎಂಬಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ಸುರೇಶ್ ಅವರಿಗೆ ಹುಡುಕಾಟದಲ್ಲಿ ನಡೆಸಿದ್ದರು.

- Advertisement -

ಸುರೇಶ್ ಅವರು ಕಾಣೆಯಾಗಿರುವ ಬೆನ್ನಲ್ಲೇ ಸುರೇಶ್ ಪತ್ನಿಗೆ ವಿಷಯ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಶೋಭಾ ಕುಶಾಲನಗರದ ಪೊಲೀಸ್ ಠಾಣೆಗೆ ದೂರು ನೀಡಿ ಹುಡುಕಿಕೊಡುವಂತೆ ಮನವಿ ಮಾಡಿದರು.

ಮೂಲತಃ ಸುರೇಶ್ ಹಾಸನ ಜಿಲ್ಲೆಯ ಕೊಣನೂರಿನವರಾಗಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೆ ಸಾಕಷ್ಟು ರಜೆ ಹಾಕುತ್ತಿದ್ದರು ಎಂದು ಹೇಳಲಾಗುತ್ತಿದೆ.

Join Whatsapp