ನಾಪತ್ತೆಯಾಗಿದ್ದ ಅರಣ್ಯ ವೀಕ್ಷಕ ಶವವಾಗಿ ಪತ್ತೆ

ಮಡಿಕೇರಿ: ಕಳೆದ ನಾಲ್ಕು ದಿನಗಳ ಹಿಂದೆ ವಿರಾಜಪೇಟೆ ತಾಲೂಕಿನ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದಾಗ ನಾಪತ್ತೆಯಾಗಿದ್ದ ಅರಣ್ಯ ವೀಕ್ಷಕರೊಬ್ಬರು ಇಂದು ಬಾಡಗ ಗ್ರಾಮದ ಕೊಕ್ಕದಲ್ಲಿರುವ ನದಿಯಲ್ಲಿ  ಶವವಾಗಿ ಪತ್ತೆಯಾಗಿದ್ದಾರೆ.

ಅರಣ್ಯ ರಕ್ಷಕ ತರುಣ್(23) ಮೃತ ದುರ್ದೈವಿ. ಕಳೆದ ನಾಲ್ಕು ದಿನಗಳ ಹಿಂದೆ ಸಹೋದ್ಯೋಗಿಗಳ ಜೊತೆ ಬೀಟ್‌ಗೆ ಹೋಗಿರುವ ಸಂದರ್ಭದಲ್ಲಿ ಬರೋಪೋಳೆ ನದಿಯ ಸಮೀಪದಲ್ಲಿ ಕಾಲು ಜಾರಿ ಬಿದ್ದಿರುವ ಬಗ್ಗೆ ತರುಣ್ ಸಹೋದ್ಯೋಗಿಗಳು ಮಾಹಿತಿ ನೀಡಿದ್ದರು.

- Advertisement -

ಈ ಹಿನ್ನೆಲೆಯಲ್ಲಿ ಎನ್.ಡಿ ಆರ್.ಎಫ್ ನುರಿತ ಮುಳುಗು ತಜ್ಞರ ತಂಡ ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ ಮೃತದೇಹ ಹೊರ ತೆಗೆದಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ  ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -