“ಮಿಸ್ ಇಂಡಿಯಾ–2022” ಕಿರೀಟ ಮುಡಿಗೇರಿಸಿಕೊಂಡ ಕರಾವಳಿ ಬೆಡಗಿ

Prasthutha|

ಮುಂಬೈ: 58ನೇ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ ಸಿನಿ ಶೆಟ್ಟಿ ‘ಮಿಸ್ ಇಂಡಿಯಾ 2022’ ಮುಕುಟ ಧರಿಸಿದ್ದಾರೆ. ಪ್ರಸ್ತುತ ಮುಂಬೈನಲ್ಲಿ ವಾಸವಿರುವ ಸಿನಿ ಶೆಟ್ಟಿ ಮೂಲತಃ ದಕ್ಷಿಣಕನ್ನಡವರು ಅನ್ನೋದು ಹೆಮ್ಮೆಯ ವಿಚಾರ.

- Advertisement -


2020ರ ‘ಮಿಸ್ ಇಂಡಿಯಾ’ ಮಾನಸಾ ವಾರಾಣಸಿ ಅವರು ಸಿನಿ ಶೆಟ್ಟಿಗೆ ಕಿರೀಟವಿರಿಸಿದರು. ಮಿಸ್ ವರ್ಲ್ಡ್ ಸ್ಪರ್ಧೆಯ ಮುಂದಿನ ಆವೃತ್ತಿಯಲ್ಲಿ ಸಿನಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.


21 ವರ್ಷದ ಶಿನಾತಾ ಚೌಹಾಣ್ ಸೌಂದರ್ಯ ಸ್ಪರ್ಧೆಯ ಎರಡನೇ ರನ್ನರ್ ಅಪ್ ಆದರು. ರೂಬಲ್ ಶೇಖಾವತ್ ಅವರನ್ನು ಮೊದಲ ರನ್ನರ್ ಅಪ್ ಎಂದು ಘೋಷಿಸಲಾಯಿತು.

- Advertisement -


ಅಂತಿಮ ಸುತ್ತಿನ ಸ್ಪರ್ಧೆಯು ಜುಲೈ 03 ರಂದು ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಿತು.

Join Whatsapp