ಮೋದಿ ಸರ್ಕಾರದ ತಪ್ಪು ನೀತಿ ಮತ್ತು ದುರಾಡಳಿತದಿಂದ ಆರ್ಥಿಕ ಅಭಿವೃದ್ಧಿ 20 ವರ್ಷ ಹಿಂದಕ್ಕೆ: ಕಾಂಗ್ರೆಸ್

Prasthutha|

ನವದೆಹಲಿ: ಪ್ರಧಾನಿ ಮೋದಿಯವರ ತಪ್ಪು ನೀತಿ ಮತ್ತು ದುರಾಡಳಿತವು ದೇಶದ ಆರ್ಥಿಕ ಅಭಿವೃದ್ಧಿಯನ್ನು 20 ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement -


ಆರ್ಥಿಕ ಬೆಳವಣಿಗೆ ಎಂದರೆ, ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವುದು. ಇದು ಎಲ್ಲಾ ದೇಶಗಳು ಅನುಸರಿಸುತ್ತಿರುವ ಕ್ರಮ. ಈ ದಿಸೆಯಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಸಾಧಿಸಿದ್ದ ಪ್ರಗತಿಯನ್ನು ನರೇಂದ್ರ ಮೋದಿ ಸರ್ಕಾರ ಹಿಮ್ಮುಖಗೊಳಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಪಾದಿಸಿದ್ದಾರೆ.



Join Whatsapp