ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ| ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ವಿರುದ್ಧ ದೂರು ದಾಖಲು

Prasthutha|

ಬೆಂಗಳೂರು: ಕೊಡಗು ಜಿಲ್ಲೆಯ ವಿರಾಜಪೇಟೆ ಬಿಜೆಪಿ ಶಾಸಕ ಕೆಜಿ ಬೋಪಯ್ಯ ಚುನಾವಣಾ ಆಯೋಗಕ್ಕೆ ತಮ್ಮ ಜನ್ಮದಿನಾಂಕವನ್ನು ತಪ್ಪಾಗಿ ನೀಡಿ ಪೇಚಿಗೆ ಸಿಲುಕಿದ್ದಾರೆ.

- Advertisement -

ಶಾಸಕ ಕೆಜಿ ಬೋಪಯ್ಯ ಅವರು ಚುನಾವಣಾ ಆಯೋಗಕ್ಕೆ ತಮ್ಮ ಜನ್ಮದಿನಾಂಕವನ್ನು ತಪ್ಪಾಗಿ ನೀಡಿದ್ದಾರೆಂದು ಪಿಬಿ ತಿಮ್ಮಯ್ಯ ಎಂಬುವುವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಜಿ ಬೋಪಯ್ಯ ಚುನಾವಣಾ ಆಯೋಗದ ನಾಮಪತ್ರದಲ್ಲಿ ತಮ್ಮ ವಯಸ್ಸು 65 ಎಂದು ದಾಖಲಿಸಿ ಸುಳ್ಳು ಮಾಹಿತಿ ನೀಡಿದ್ದಾರೆ.

- Advertisement -

ಬೋಪಯ್ಯ ಅವರು 26-10-1979 ರಲ್ಲಿ ವಕೀಲರ ಕರ್ನಾಟಕ ಬಾರ್ ಕೌನ್ಸಿಲ್​ನ​ ಸದಸ್ಯರಾಗಿದ್ದರು. ಈ ವೇಳೆ ಬಾರ್​ ಕೌನ್ಸಿಲ್​ನಲ್ಲಿ ತಮ್ಮ ಜನ್ಮ ದಿನಾಂಕ 17-10-1951 ಎಂದು ದಾಖಲಿಸಿದ್ದರು. ಈ ಪ್ರಕಾರ 2018ರಲ್ಲಿ ಕೆ ಜಿ ಬೋಪಯ್ಯ ಅವರ ನೈಜ ವಯಸ್ಸು 67. ಆದರೆ ಬೋಪಯ್ಯ 65 ಎಂದು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಬೋಪಯ್ಯ ಸುಳ್ಳು ಮಾಹಿತಿ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

2004 ಮತ್ತು 2013ರಲ್ಲೂ ತಪ್ಪು ಮಾಹಿತಿ ನೀಡಿದ್ದ ಬೋಪಯ್ಯ
2004ರಲ್ಲಿ ಬೋಪಯ್ಯ ವಯಸ್ಸು 53 ಇದ್ದು, ಚುನಾವಣಾ ಆಯೋಗಕ್ಕೆ 49 ವರ್ಷ ಎಂದು ನೀಡಿದ್ದರು. ನಂತರ 2013ರ ಚುನಾವಣೆಯ ಸಮಯದಲ್ಲೂ ಅವರ 61 ಇದ್ದು, 58 ವರ್ಷ ಎಂದು ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರು ದಾಖಲಾಗಿದೆ.

Join Whatsapp