ತ್ರಿಬಲ್​ ರೈಡಿಂಗ್​ ಪ್ರಶ್ನಿಸಿದ ಹೋಂ ಗಾರ್ಡ್​ ಗೆ ಹಲ್ಲೆ ನಡೆಸಿದ ಯುವಕ

Prasthutha|

ಬೆಂಗಳೂರು: ತ್ರಿಬಲ್​ ರೈಡಿಂಗ್​ ಹೋಗುತ್ತಿದ್ದಾಗ ತಡೆದು ಪ್ರಶ್ನಿಸಿದಕ್ಕೆ ಹೋಂ ಗಾರ್ಡ್​ ಮೇಲೆ ಯುವಕನೊಬ್ಬ ಬೈಕಿನಿಂದ ಇಳಿದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

- Advertisement -

ಮಹದೇವಪುರದ ಔಟರ್​ ರಿಂಗ್​ ರಸ್ತೆಯಲ್ಲಿ ಒಂದೇ ಬೈಕ್​ನಲ್ಲಿ ಮೂವರು ಹೋಗುತ್ತಿದ್ದವರನ್ನು ಹೋಂ ಗಾರ್ಡ್ ಸುದೇಶನ್​ ರಾಮ್ ಪ್ರಶ್ನಿಸಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಓರ್ವ ಬೈಕ್​ನಿಂದ ಇಳಿದು ಬಂದು ಏಕಾಏಕಿ ಹಲ್ಲೆ ನಡೆಸಿದ್ದಾನೆ. ಜನವರಿ 7ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹಲ್ಲೆ ನಡೆಸಿದ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  

- Advertisement -

ಹಲವರು ಸಿಸಿಟಿವಿ ದೃಶ್ಯವನ್ನು ಟ್ವೀಟ್ ಮಾಡಿ ಬೆಂಗಳೂರು ಸಂಚಾರಿ ಪೊಲೀಸರಿಗೆ ಟ್ಯಾಗ್​ ಮಾಡಿದ್ದು, ಟ್ವೀಟ್​ ನೋಡಿದ ಹಿರಿಯ ಪೊಲೀಸ್​ ಅಧಿಕಾರಿಗಳು ಕೂಡಲೇ ಹಲ್ಲೆಗೊಳಗಾದ ಹೋಂ ಗಾರ್ಡ್​ ನನ್ನು ಠಾಣೆಗೆ ಕರೆಸಿ ದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆಗೆ ಮಹದೇವಪುರ ಪೊಲೀಸರು ಮುಂದಾಗಿದ್ದಾರೆ.

Join Whatsapp