‘ತಾಂಡವ್’ ಬಳಿಕ ಈಗ ‘ಮಿರ್ಝಾಪುರ’ ವೆಬ್ ಸೀರೀಸ್ ವಿವಾದ | ಉ.ಪ್ರ. ಪೊಲೀಸರು ಮುಂಬೈಗೆ

Prasthutha|

ನವದೆಹಲಿ : ಅಮೆಝಾನ್ ಪ್ರೈಮ್ ನಲ್ಲಿ ಪ್ರಸಾರವಾಗುವ ವೆಬ್ ಸೀರೀಸ್ ಗಳಲ್ಲಿ ವಿವಾದಕ್ಕೆ ಸಿಲುಕಿರುವ ‘ತಾಂಡವ್’ ಚಿತ್ರದ ಬಳಿಕ ಈಗ ಮತ್ತೊಂದು ಚಿತ್ರ ಸಂಕಷ್ಟಕ್ಕೆ ಸಿಲುಕಿದೆ. ‘ಮಿರ್ಝಾಪುರ’ ವೆಬ್ ಸೀರೀಸ್ ಉತ್ತರ ಪ್ರದೇಶದ ಘನತೆಗೆ ಧಕ್ಕೆ ತರುತ್ತಿದೆ ಎಂಬ ದೂರಿನ ಆಧಾರದಲ್ಲಿ ಈಗ ಅಲ್ಲಿನ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದೆ.

- Advertisement -

ಉತ್ತರ ಪ್ರದೇಶದ ಮಿರ್ಝಾಪುರದ ಪತ್ರಕರ್ತರೊಬ್ಬರು ದಾಖಲಿಸಿರುವ ದೂರಿನ ಆಧಾರದಲ್ಲಿ, ಪೊಲೀಸರು ಚಿತ್ರ ತಂಡದ ವಿರುದ್ಧ ಕ್ರಮ ಕೈಗೊಳ್ಳಲು ಮುಂಬೈ ಪ್ರಯಾಣಿಸಿದ್ದಾರೆ. ಅಲ್ಲದೆ, ಈ ಕುರಿತ ಅರ್ಜಿ ಆಧಾರದಲ್ಲಿ ಸೀರೀಸ್ ನಿರ್ಮಾಪಕರು ಮತ್ತು ಅಮೇಝಾನ್ ಪ್ರೈಮ್ ವಿರುದ್ಧ ಸುಪ್ರೀಂ ಕೋರ್ಟ್ ಕೂಡ ಇಂದು ನೋಟಿಸ್ ಜಾರಿಗೊಳಿಸಿದೆ.

‘ಮಿರ್ಝಾಪುರ’ ವೆಬ್ ಸೀರೀಸ್ ನಲ್ಲಿ ಮಿರ್ಝಾಪುರವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಮಿರ್ಝಾಪುರ ಭಯೋತ್ಪಾದಕರ ಅಡಗುದಾಣ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಾಣ ಎಂಬಂತೆ ಬಿಂಬಿಸಲಾಗಿದೆ ಎಂದು ಆರೋಪಿಸಿ ಎಸ್.ಕೆ. ಕುಮಾರ್ ಎಂಬವರು ಸುಪ್ರೀಂ ಕೋರ್ಟ್ ಗೆ ದೂರು ದಾಖಲಿಸಿದ್ದರು.   



Join Whatsapp