ದುಬೈ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಕನ್ನಡಿಗರ “ಮಿರಾತ್ ರಿಯಲ್ ಎಸ್ಟೇಟ್”

Prasthutha|

ದುಬೈ: ಇತ್ತೀಚೆಗೆ ದುಬೈನ ಸಿಟಿ ವಾಕ್ ಕೊಕಾ ಕೊಲಾ ಅರೇನಾದಲ್ಲಿ ಪ್ರತಿಷ್ಠಿತ ಬಯ್ಯೂತ್ ಮತ್ತು ಡುಬಿಝಿಲ್ ಆಯೋಜಿಸಿದ #B3DXB2022 ಅದ್ದೂರಿ ಕಾರ್ಯಕ್ರಮದಲ್ಲಿ ಸರಿಸುಮಾರು 1700ಕ್ಕಿಂತಲೂ ಅಧಿಕ ರಿಯಲ್ ಎಸ್ಟೇಟ್ ಕಂಪೆನಿಗಳು ಪಾಲ್ಗೊಂಡಿದ್ದವು. ಈ ಕಾರ್ಯಕ್ರಮದಲ್ಲಿ ಅಲ್ ಮಿರಾತ್ ರಿಯಲ್ ಎಸ್ಟೇಟ್ ಹಾಗೂ ಆಯ್ದ ಕೆಲವು ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಪ್ರಶಸ್ತಿ ಲಭಿಸಿದೆ.

- Advertisement -

ಕಳೆದ 17ವರುಷಗಳಿಂದ ದುಬೈಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಳೂರು ಮೂಲದವರಾದ ಸಾದಿಕ್ ಅಲಿ ಒಡೆತನದ ಮಿರಾತ್ ರಿಯಲ್ ಎಸ್ಟೇಟ್  ಸಂಸ್ಥೆಯು ಬಹುಪಾಲು ಕನ್ನಡಿಗರನ್ನು ಹೊಂದಿದ್ದು ಉತ್ತಮ ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿದೆ.

ಮಿರಾತ್ ಸಂಸ್ಥೆಯು ಯುಎಇ ಪ್ರತಿಷ್ಠಿತ ಡೆವಲಪ್ ರಗಳಾದ ಇಮಾರ್, ದುಬೈ ಪ್ರಾಪರ್ಟೀಸ್, ನಖೀಲ್, ಮಿರಾಸ್, ದಮಾಕ್, ಶೋಭಾ, ಅಲ್ ವಾಸ್ಲ್ ಹಾಗೂ ಹಲವಾರು ಕಂಪೆನಿಗಳ ಜೊತೆಗೆ ಕಾರ್ಯನಿರ್ವಹಿಸುತ್ತಿದೆ.



Join Whatsapp