ಯುಟ್ಯೂಬ್ ನೋಡಿ ಜನ್ಮ ನೀಡಿದ ಬಳಿಕ ಮಗು ಕೊಂದ ಅಪ್ರಾಪ್ತೆ

Prasthutha|

ನಾಗಪುರ(ಮಹಾರಾಷ್ಟ್ರ); ಲೈಂಗಿಕ ಶೋಷಣೆಗೆ ಒಳಗಾದ 15ರ ಹರೆಯದ ಬಾಲಕಿಯೊಬ್ಬಳು, ಯು ಟ್ಯೂಬ್ ವಿಡಿಯೋ ನೋಡಿ ಮನೆಯಲ್ಲಿಯೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು, ಬಳಿಕ ಶಿಶುವನ್ನು ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

- Advertisement -


ಸಾಮಾಜಿಕ ಜಾಲತಾಣದ ಮೂಲಕ ಪರಿಚಿತವಾದ ವ್ಯಕ್ತಿಯೊಬ್ಬನಿಂದ ಅಪ್ರಾಪ್ತ ಬಾಲಕಿ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ಆರೋಗ್ಯ ಸಮಸ್ಯೆಯಿರುವುದಾಗಿ ತನ್ನ ತಾಯಿಯೊಂದಿಗೆ ಹೇಳಿದ್ದ ಆ ಬಾಲಕಿ, ಗರ್ಭಿಣಿ ವಿಚಾರವನ್ನು ಮರೆ ಮಾಚಿದ್ದಳು, ಇದೇ ರೀತಿ ರಹಸ್ಯ ಕಾಪಾಡಿದ್ದ ಅಂಬಾಜಾರಿ ಏರಿಯಾದ ಬಾಲಕಿಗೆ ಮನೆಯಲ್ಲಿಯೇ ಡೆಲಿವರಿ ಹೇಗೆ ಎಂಬ ಐಡಿಯಾ ಹೊಳೆದಿದ್ದು, ಯೂ ಟ್ಯೂಬ್ ವಿಡಿಯೋ ವೀಕ್ಷಿಸಿ, ಮಾರ್ಚ್ 2 ರಂದು, ಮನೆಯಲ್ಲಿಯೇ ಆಕೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ.
ಕೂಡಲೇ ಆ ಮಗುವನ್ನು ಕತ್ತು ಹಿಸುಕಿ ಕೊಂದಿದ್ದು, ಮನೆಯಲ್ಲಿಯೇ ಪೆಟ್ಟಿಗೆಯೊಂದರಲ್ಲಿ ಮಗುವಿನ ಶವ ಹಾಕಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ. ತಾಯಿ ಮನೆಗೆ ಬಂದು ತನ್ನ ಪುತ್ರಿಯ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದಾಗ ಎಲ್ಲಾ ವಿಷಯ ತಿಳಿದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಬಾಲಕಿ ಐಪಿಸಿ ಸೆಕ್ಷನ್ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಕೊಲೆ ಕೇಸ್ ದಾಖಲಿಸಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Join Whatsapp