‘ರಾಜ್ಯಕ್ಕೆ 1 ಸಾವಿರ ಮೆಟ್ರಿಕ್ ಟನ್ ಆಮ್ಲಜನಕ ಪೂರೈಸಿ’ : ಕೇಂದ್ರ ಸರಕಾರಕ್ಕೆ ಸಚಿವ ಸುಧಾಕರ್ ಮನವಿ

Prasthutha|

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಗಂಭೀರಾವಸ್ಥೆಗೆ ತಲುಪಿರುವುದರಿಂದ ಆಕ್ಸಿಜನ್‌ ಕೊರತೆ ಉಂಟಾಗಿದ್ದು, ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಪೂರೈಕೆ ಮಾಡಲು ರಾಜ್ಯಕ್ಕೆ ಕನಿಷ್ಟ 1 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಪ್ರಧಾನಿಯವರಿಗೆ ಮನವಿ ಮಾಡಿದ್ದೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

- Advertisement -

“ಪ್ರಧಾನಿ ಮೋದಿಯವರ ಬಳಿ ಈ ತಿಂಗಳ ಅಂತ್ಯದೊಳಗೆ 1000 ಟನ್ ಆಕ್ಸಿಜನ್ ಒದಗಿಸಬೇಕೆಂದು ಮನವಿ ಮಾಡಲಾಗಿದೆ. ಆಕ್ಸಿಜನ್ ಜನರೇಟರ್, ಫೋರ್ಟಬಲ್‍ಗಳನ್ನ ತರಿಸಲು ನಿರ್ಧರಿಸಿದ್ದೇವೆ’ ಎಂದು ಪ್ರಧಾನಿ ಮೋದಿಯವರೊಂದಿಗೆ ಸಭೆ ಬಳಿಕ ಮಾತನಾಡಿದ ಅವರು ತಿಳಿಸಿದ್ದಾರೆ.

‘ಪ್ರಧಾನಿಗಳ ಬಳಿ ಎರಡು ಬೇಡಿಕೆಗಳನ್ನು ಇಟ್ಟಿದ್ದು, ಮೊದಲನೆಯದು ಆಕ್ಸಿಜನ್, ಎರಡನೆಯದು ರೆಮಿಡಿಸಿವಿರ್. ನಮ್ಮಲ್ಲಿ ಇದು ತಯಾರಿಕೆ ಇದ್ದರೂ, ಕೇಂದ್ರ ಸರ್ಕಾರದ ಸೂಚನೆಯಂತೆ ಬಳಸಬೇಕಿದೆ. ಹೀಗಾಗಿ, ನಮಗೆ 2 ಲಕ್ಷ ಲಸಿಕೆ ಬೇಕು ಎಂದಿದ್ದೇವೆ. ಪ್ರಧಾನಿಗಳು ಇದಕ್ಕೂ ಒಪ್ಪಿಗೆ ನೀಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

Join Whatsapp