ಅನಧಿಕೃತ ಬ್ಯಾನರ್​​ ಅಳವಡಿಕೆ: ಸಚಿವ ಪ್ರಿಯಾಂಕ್ ಖರ್ಗೆಗೆ ದಂಡ

Prasthutha|

ಕಲಬುರಗಿ: ಅನುಮತಿ ಪಡೆಯದೆ ಬೆಂಬಲಿಗರು ಹಾಕಿದ್ದ ಬ್ಯಾನರ್​ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

- Advertisement -

‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಲು ಸಚಿವ ಪ್ರಿಯಾಂಕ್​ ಖರ್ಗೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ. ನಗರದ ಆಳಂದ ಚೆಕ್​ಪೋಸ್ಟ್​ ಬಳಿ ಪ್ರಿಯಾಂಕ್ ಖರ್ಗೆ ಭಾವಚಿತ್ರವಿರುವ ಬ್ಯಾನರ್​​ ಅನ್ನು ಬೆಂಬಲಿಗರು ಹಾಕಿದ್ದರು. ಬ್ಯಾನರ್ ಹಾಕಿದವರ ಹೆಸರಿಲ್ಲದಿದ್ದರಿಂದ ಸಚಿವರಿಗೆ ಪಾಲಿಕೆ ದಂಡವಿಧಿಸಿದೆ.

ಸದ್ಯ 5 ಸಾವಿರ ರೂ. ದಂಡ ಪಾವತಿಸಲು ಪ್ರಿಯಾಂಕ್ ಖರ್ಗೆ ಒಪ್ಪಿಕೊಂಡಿದ್ದು, ತಮ್ಮ ಸಿಬ್ಬಂದಿಗೆ ದಂಡದ ಹಣ ಪಾವತಿಸಲು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅನುಮತಿ ಪಡೆಯದೆ ಬ್ಯಾನರ್ ಹಾಕುವವರ ವಿರುದ್ಧ ಕ್ರಮಗೊಳ್ಳುವಂತೆ ಕೆಲವು ದಿನಗಳ ಹಿಂದೆ ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದರು.