ಸಚಿವರು ಫೋನ್ ರಿಸೀವ್ ಮಾಡುತ್ತಿಲ್ಲ: ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಅಸಮಾಧಾನ

Prasthutha|

ದಾವಣಗೆರೆ : ಕೆಲ ಸಚಿವರು ನಮ್ಮ ಕರೆಗಳಿಗೆ ಸ್ಪಂದಿಸುವುದಿಲ್ಲ, ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರೂ ಅದೇ ರೀತಿ ಮುಂದುವರೆದಿದೆ. ಸಚಿವರು ಸುಧಾರಿಸಿಲ್ಲ, ಶಾಸಕರ ಫೋನ್ ಕಾಲ್ ರಿಸೀವ್ ಮಾಡುತ್ತಿಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜ ವಿ ಶಿವಗಂಗಾ ಸ್ವಪಕ್ಷದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

- Advertisement -


ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಗಂಗೂರು ಗ್ರಾಮದಲ್ಲಿ ಮಾತನಾಡಿದ ಅವರು, “ಸಿಎಂ ಮತ್ತು ಡಿಸಿಎಂ ಸಭೆ ಮಾಡಿದರೂ ಸಹ ಯಾವುದೇ ಸುಧಾರಣೆ ಆಗಿಲ್ಲ, ಕೆಲ ಸಚಿವರ ಪಿಎ ಗಳು ಕೂಡ ಅದೇ ದಾರಿ ಹಿಡಿದಿದ್ದಾರೆ. ಒಬ್ಬ ಸಚಿವರಿಗೆ 135 ಕ್ಷೇತ್ರದ ಶಾಸಕರ ಫೋನ್ ನಂಬರ್ ಸೇವ್ ಮಾಡಿಕೊಳ್ಳುವಷ್ಟು ಅವರ ಮೊಬೈಲ್ನಲ್ಲಿ ಮೆಮೊರಿ ಇರೋದಿಲ್ವಾ?, ಎಲ್ಲ ಶಾಸಕರ ಫೋನ್ ನಂಬರ್ ಸೇವ್ ಮಾಡಿಕೊಂಡರೆ ಯಾರು ಕಾಲ್ ಮಾಡಿದರು ಎಂದು ಗೊತ್ತಾಗುತ್ತದೆ. ಅದ್ದರಿಂದ ಈ ರೀತಿ ಆಗಬಾರದು” ಎಂದು ಮಾಧ್ಯಮಗಳ ಮುಂದೆ ಬೇಸರ ಹೊರಹಾಕಿದರು.



Join Whatsapp