ಕುಡಿಯುವ ನೀರು, ಮೇವು ಸಿದ್ಧತೆಗೆ ಡಿಸಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

Prasthutha|

ಬೆಂಗಳೂರು: ಬರದ ಪರಿಸ್ಥಿತಿ ಇಷ್ಟು ದಿನ ಹತೋಟಿಯಲ್ಲಿ ಇತ್ತು. ಇನ್ನು ಮುಂದೆ ಇನ್ನಷ್ಟು ಸಮಸ್ಯೆ ಆಗಬಹುದು. ಯಾವುದಾದರೂ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಂದರೆ 24 ಗಂಟೆ ಒಳಗೆ ವ್ಯವಸ್ಥೆ ಮಾಡಲು ಸಿಎಂ ಸಿದ್ದರಾಮಯ್ಯ ಗಡುವು ನೀಡಿದ್ದಾರೆ. ಕುಡಿಯುವ ನೀರು, ಮೇವು ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

- Advertisement -


ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಟ್ಯಾಂಕರ್ ಗಳು ಟೆಂಡರ್ ಮಾಡಿಟ್ಟುಕೊಳ್ಳಲು ಸೂಚಿಸಿದೆ. ಟ್ಯಾಂಕರ್ ನೀರಿನಿಂದ ಜನರಿಗೆ ನೀರು ಸರಬರಾಜು ಮಾಡಿದರೆ ಸಮಾಧಾನ ಇಲ್ಲ. ಹಾಗಾಗಿ ಖಾಸಗಿ ಬೋರ್ವೆಲ್ ಮೂಲಕ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.


991 ಪರವಾನಗಿ ಸರ್ವೆಯರ್ ಗಳನ್ನು ಎಲ್ಲ ಜಿಲ್ಲೆಗಳಿಗೆ ಒದಗಿಸುತ್ತಿದ್ದೇವೆ. 364 ಸರ್ಕಾರಿ ಸರ್ವೆಯರ್ ನೇಮಕಾತಿ ಮಾಡುತ್ತಿದ್ದೇವೆ. ಮೇಲುಸ್ತುವಾರಿಗೆ 27 ಸರ್ವೆ ಅಸಿಸ್ಟಂಟ್ ಲ್ಯಾಂಡ್ ರೆಕಾರ್ಡ್ಸ್ ಗಳ ನೇಮಕ ಮಾಡುತ್ತಿದ್ದೇವೆ. ಆಧುನಿಕ ಸರ್ವೆ ಉಪಕರಣಗಳ ಖರೀದಿ ಮಾಡಿ ಎಲ್ಲ ತಾಲೂಕುಗಳಿಗೆ ನೀಡುತ್ತಿದ್ದೇವೆ. 18 ಕೋಟಿ ರೂ. ವೆಚ್ಚದಲ್ಲಿ ಸರ್ವೆ ರೋವರ್ ಉಪಕರಣಗಳ ನೀಡಲಾಗುತ್ತಿದೆ ಎಂದು ತಿಳಿಸಿದರು.



Join Whatsapp