ಸಂತ್ರಸ್ತರ ನೋವು ಆಲಿಸದೆ ಹೊರಟ ಸಚಿವೆ ಕರಂದ್ಲಾಜೆ: ಗ್ರಾಮಸ್ಥರಿಂದ ಪ್ರತಿಭಟನೆ

Prasthutha|

ಚಿಕ್ಕಮಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಂತ್ರಸ್ತರ ಸಮಸ್ಯೆ ಆಲಿಸದೆ ತೆರಳಿದರು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಕೊಪ್ಪ ತಾಲ್ಲೂಕಿನ ಗುಡ್ಡೆತೋಟದಲ್ಲಿ ನಡೆದಿದೆ.

- Advertisement -

ಸಚಿವರಿಗೆ ಸಮಸ್ಯೆ ತೋಡಿಕೊಳ್ಳಲು ಜನರು ಕಾದು ನಿಂತಿದ್ದರು. ಆದರೆ, ಶೋಭಾ ಅವರು ಮಣ್ಣು ಕುಸಿದ ಸ್ಥಳ ಪರಿಶೀಲಿಸಿ ಯಾರೊಂದಿಗೂ ಮಾತನಾಡದೇ ಹೊರಟರು. ಸಚಿವರ ನಡೆ ಖಂಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಚಿವೆ ವಿರುದ್ಧ ಘೋಷಣೆ ಕೂಗಿದರು.

‘ಸಚಿವೆ ಶೋಭಾ ಅವರು ನೊಂದವರ ಕಷ್ಟ ಆಲಿಸದೆ ತೆರಳಿದ್ದಾರೆ. ಅವರು ಸ್ಥಳಕ್ಕೆ ಬಂದು ಜನರ ಸಮಸ್ಯೆ ಆಲಿಸಬೇಕು ಎಂದು ಪಟ್ಟುಹಿಡಿದು ಪ್ರತಿಭಟನೆಯಲ್ಲಿ ತೊಡಗಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೀರ್ತಿ ರಾಜ್ ಹೇಳಿದ್ದಾರೆ.

Join Whatsapp