ಸಚಿವ ಡಾ. ಸುಧಾಕರ್’ಗಿಂತ ಅವರ ಪತ್ನಿಯೇ ಶ್ರೀಮಂತೆ !

Prasthutha|

ಬೆಂಗಳೂರು: ಗುರುವಾರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು 4.28 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದು, ಅವರಿಗಿಂತ ಅವರ ಪತ್ನಿ ಡಾ.ಪ್ರೀತಿ ಜಿ.ಎ. ಹೆಚ್ಚು ಶ್ರೀಮಂತೆ ಎಂಬುದು ಅಫಿದವಿತ್’ನಿಂದ ತಿಳಿದುಬಂದಿದೆ.

- Advertisement -


ಸುಧಾಕರ್ ಬಳಿ 4.28 ಕೋಟಿ ರೂ. ಆಸ್ತಿ ಇದ್ದರೆ, ಅವರ ಪತ್ನಿ ಬಳಿ 22.69 ಕೋಟಿ ರೂ. ಆಸ್ತಿ ಇದೆ.
ಸುಧಾಕರ್ ಅವರು 2.79 ಕೋಟಿ ರೂ. ಚರಾಸ್ತಿ ಘೋಷಿಸಿಕೊಂಡಿದ್ದರೆ, ತಮ್ಮ ಪತ್ನಿ ಬಳಿ 6.59 ಕೋಟಿ ರೂ. ಚರಾಸ್ತಿ, ಹೋಂಡಾ ಆಕ್ವಿವಾ ವಾಹನ ಇರುವುದಾಗಿ ತಿಳಿಸಿದ್ದಾರೆ.


2019ರ ಉಪಚುನಾವಣೆ ವೇಳೆ ಡಾ.ಕೆ. ಸುಧಾಕರ್ ತಮ್ಮ ಚರಾಸ್ತಿಯ ಒಟ್ಟು ಮೌಲ್ಯ 1.18 ಕೋಟಿ ಹಾಗೂ ಪತ್ನಿಯ ಚರಾಸ್ತಿಯ ಮೌಲ್ಯ 13.70 ಕೋಟಿ ಎಂದು ಘೋಷಿಸಿದ್ದರು. ಆದರೆ ಈ ಬಾರಿ ತಮ್ಮ ಚರಾಸ್ತಿಗಳ ಒಟ್ಟು ಮೌಲ್ಯ 2.79 ಕೋಟಿ ಹಾಗೂ ಪತ್ನಿಯ ಚರಾಸ್ತಿಗಳ ಮೌಲ್ಯ 6.59 ಕೋಟಿ ಎಂದು ಘೋಷಿಸಿದ್ದಾರೆ. ಈ ಪ್ರಕಾರ ಅವರ ಮೂರೇ ವರ್ಷದಲ್ಲಿ ಅವರ ಪತ್ನಿಯ ಚರಾಸ್ತಿಯ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದೆ.

- Advertisement -


ಪತ್ನಿಯ ಬಳಿಯಿಂದಲೇ 2016 ಮತ್ತು 2019ರಲ್ಲಿ 40.33 ಲಕ್ಷ ಹಣವನ್ನು ಡಾ.ಕೆ.ಸುಧಾಕರ್ ಸಾಲ ಪಡೆದಿದ್ದಾರೆ. ಸುಧಾಕರ್ ತಂದೆ ಪಿ.ಎನ್.ಕೇಶವರೆಡ್ಡಿ ಅವರಿಗೂ ಡಾ.ಪ್ರೀತಿ 55.57 ಲಕ್ಷ ಸಾಲ ನೀಡಿದ್ದಾರೆ.


ಸುಧಾಕರ್ ಅವರ ಬ್ಯಾಂಕ್ ಖಾತೆಗಳಲ್ಲಿ 1.29 ಕೋಟಿ ರೂ. ಠೇವಣಿ ಇದ್ದರೆ, ಅವರ ಪತ್ನಿ ಸುಮಾರು 36 ಲಕ್ಷ ಠೇವಣಿ ಹೊಂದಿದ್ದಾರೆ. ಇನ್ನು ಸಂಸ್ಥೆಗಳ ಷೇರುಗಳು, ಚಾಲ್ತಿ ಖಾತೆಗಳಲ್ಲೂ ಪತಿ-ಪತ್ನಿ ದೊಡ್ಡ ಮೊತ್ತದ ಹಣ ಹೊಂದಿದ್ದಾರೆ.


ಸುಧಾಕರ್ ಅವರ ಬಳಿ 160 ಗ್ರಾಂ ಬಂಗಾರ, 9 ಕೆಜಿ ಬೆಳ್ಳಿ ಇದ್ದರೆ, ಪ್ರೀತಿ ಬಳಿ 1 ಕೆಜಿ ಚಿನ್ನ, 21 ಕೆಜಿ ಬೆಳ್ಳಿ ಇದೆ. ಇವರ ಚಿನ್ನದ ಮೌಲ್ಯ 56 ಲಕ್ಷ ರೂ.ಗಳಾದರೆ, ಬೆಳ್ಳಿ ಮೌಲ್ಯ 12 ಲಕ್ಷ ರೂ.ಗಳಾಗಿವೆ. ಸುಧಾಕರ್ 6 ಲಕ್ಷ ರೂ. ಮೌಲ್ಯದ ಚಿನ್ನ, 3.55 ಲಕ್ಷ ರೂ. ಮೌಲ್ಯದ ಬೆಳ್ಳಿ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ ಬೆಂಗಳೂರಿನಲ್ಲಿದೆ 14.92 ಕೋಟಿ ರೂ. ಮೌಲ್ಯದ ಮನೆ.


ಸುಧಾಕರ್ ಅವರು 52.81 ಲಕ್ಷ ರೂ. ಬೆಲೆಯ ಕೃಷಿ ಭೂಮಿ ಹೊಂದಿದ್ದರೆ, ಪತ್ನಿ 1.17 ಕೋಟಿ ರೂ., ಮೌಲ್ಯದ ಕೃಷಿ ಭೂಮಿ ಮಾಲಕಿಯಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 1.15 ಕೋಟಿ ರೂ. ಮೌಲ್ಯದ ಮನೆಯನ್ನು ಸುಧಾಕರ್ ಹೊಂದಿದ್ದರೆ, ಸದಾಶಿವ ನಗರದಲ್ಲಿ ಪತ್ನಿ ಹೆಸರಿನಲ್ಲಿ 14.92 ಕೋಟಿ ರೂ. ಮೌಲ್ಯದ ಮನೆ ಇದೆ.
ಒಟ್ಟಾರೆ 2.65 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಡಾ.ಕೆ. ಸುಧಾಕರ್ ಹೊಂದಿದ್ದರೆ, ಪತ್ನಿ 16.10 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಒಡತಿಯಾಗಿದ್ದಾರೆ.

Join Whatsapp