ಮೈಸೂರು ದಸರಾ: ಮಾವುತರಿಗೆ ಉಪಾಹಾರ ಬಡಿಸಿದ ಸಚಿವ ಡಾ.ಹೆಚ್.ಸಿ. ಮಹದೇವಪ್ಪ

Prasthutha|

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅರಮನೆಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗರ ಕುಟುಂಬದ ಸದಸ್ಯರಿಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಬೆಳಗಿನ ಉಪಹಾರ ಬಡಿಸಿದರು.

- Advertisement -


ಮೈಸೂರು ಅರಮನೆಯ ಮಂಡಳಿಯಿಂದ ಶುಕ್ರವಾರ ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಸಚಿವರು, ಹೋಳಿಗೆ, ತುಪ್ಪ, ತಟ್ಟೆ ಇಡ್ಲಿ, ಸಾಂಬಾರು ಚಟ್ನಿ, ಮಸಾಲೆ ದೋಸೆ, ಸಾಗು, ಉದ್ದಿನ ವಡೆ, ಟೊಮೆಟೊ ಬಾತ್, ಕೇಸರಿ ಬಾತ್ ಬಡಿಸಿದರು. ನಂತರ ಮಾವುತರ ಕುಟುಂಬದವರ ಜೊತೆಗೆ ಕುಳಿತು ತಾವೂ ಉಪಾಹಾರ ಸೇವನೆ ಮಾಡಿದರು.

Join Whatsapp