ದೆಹಲಿ ನೀರಿನ ಬಿಕ್ಕಟ್ಟು: ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ

Prasthutha|

ದೆಹಲಿ: ದೆಹಲಿ ನೀರಿನ ಬಿಕ್ಕಟ್ಟಿನ ಕುರಿತು ದೆಹಲಿ ಸಚಿವೆ ಅತಿಶಿ ಶುಕ್ರವಾರ ಮಧ್ಯಾಹ್ನ ಅನಿರ್ದಿಷ್ಟ ಉಪವಾಸವನ್ನು ಪ್ರಾರಂಭಿಸಿದ್ದಾರೆ.

- Advertisement -


ಸಾಧ್ಯವಾದ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಹರಿಯಾಣ ಸರ್ಕಾರವು ದೆಹಲಿಗೆ ಸಮರ್ಪಕವಾಗಿ ನೀರನ್ನು ನೀಡುತ್ತಿಲ್ಲ. ಅನ್ಯಾಯದ ವಿರುದ್ಧ ಹೋರಾಡಬೇಕಾದರೆ ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಮಹಾತ್ಮ ಗಾಂಧಿ ಬೋಧಿಸಿದ್ದಾರೆ. ಇಂದಿನಿಂದ ‘ಜಲ ಸತ್ಯಾಗ್ರಹ’ ಆರಂಭಿಸುತ್ತೇನೆ. ದೆಹಲಿಯ ಜನರು ಹರಿಯಾಣದಿಂದ ತಮ್ಮ ಸರಿಯಾದ ನೀರಿನ ಪಾಲನ್ನು ಪಡೆಯುವವರೆಗೂ ನಾನು ಉಪವಾಸ ಇರುತ್ತೇನೆ” ಎಂದು ಉಪವಾಸ ಆರಂಭಿಸುವ ಮುನ್ನ ಅತಿಶಿ ಎಕ್ಸ್ ನಲ್ಲಿ ಬರೆದಿದ್ದಾರೆ.


ರಾಜ್ ಘಾಟ್ ನಿಂದ ಎಎಪಿ ನಾಯಕರು ಜಂಗ್ ಪುರಕ್ಕೆ ತೆರಳಲಿದ್ದು, ಅಲ್ಲಿ ಅತಿಶಿ ಉಪವಾಸ ಆರಂಭಿಸಲಿದ್ದಾರೆ ಎಂದು ಎಎಪಿ ತಿಳಿಸಿದೆ.

Join Whatsapp