ಮಿಮಿಕ್ರಿ ಮಾಡುವುದು ಕಲೆ, ಬೇಕಿದ್ರೆ ಸಾವಿರ ಬಾರಿ ಮಾಡುತ್ತೇನೆ: ಟಿಎಂಸಿ ಸಂಸದ

Prasthutha|

ನವದೆಹಲಿ: ಮಿಮಿಕ್ರಿ ಮಾಡುವುದು ಒಂದು ಕಲೆಯಾಗಿದ್ದು, ಬೇಕಿದ್ರೆ ನಾನು ಸಾವಿರ ಬಾರಿ ಅದನ್ನು ಮಾಡುತ್ತೇನೆ. ಹೀಗೆ ಮಾಡಲು ನನಗೆ ಹಕ್ಕಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಹೇಳಿದ್ದಾರೆ. ‌

- Advertisement -

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕ್ಷುಲ್ಲಕ ವಿಚಾರದಲ್ಲಿ ಅಸಮಾಧಾನಗೊಂಡಿದ್ದಕ್ಕಾಗಿ ಧನ್ಕರ್ ಅವರನ್ನು ಟೀಕಿಸಿದರು. ನಾನು ಮಿಮಿಕ್ರಿ ಮಾಡುತ್ತಲೇ ಇರುತ್ತೇನೆ. ಅದೊಂದು ಕಲೆ. ಬೇಕಾದರೆ ಸಾವಿರ ಬಾರಿ ಮಾಡುತ್ತೇನೆ. ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನನಗೆ ಎಲ್ಲಾ ಹಕ್ಕುಗಳಿವೆ. ನೀವು ನನ್ನನ್ನು ಜೈಲಿಗೆ ಹಾಕಬಹುದು. ಆದರೆ ನಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.



Join Whatsapp