ಹಾಲಿನ ದರ ಹೆಚ್ಚಾಗಿಲ್ಲ, ಹಾಲಿನ ಉತ್ಪಾದನೆ ಹೆಚ್ಚಾಗಿದೆ: ಸಿಎಂ ಸಿದ್ದರಾಮಯ್ಯ

Prasthutha|

ಬೆಂಗಳೂರು: ಹಾಲಿನ ದರ ಹೆಚ್ಚಾಗಿಲ್ಲ, ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಇದೇ ಅವಧಿಯಲ್ಲಿ 90 ಲಕ್ಷ ಲೀಟರ್ ಹಾಲಿನ ಉತ್ಪಾದನೆ ಇತ್ತು. ಈ ವರ್ಷ 99 ಲಕ್ಷ ಲೀಟರ್ ಆಗಿದೆ. ಇದರಿಂದಾಗಿ ರೈತರಿಂದ ಹೆಚ್ಚುವರಿ ಹಾಲು ಬೇಡ ಎನ್ನಲು ಸಾಧ್ಯವಿಲ್ಲ. ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕು. ಇದೇ ಕಾರಣಕ್ಕೆ ಅರ್ಧ ಲೀಟರ್ ಪ್ಯಾಕ್ ನಲ್ಲಿ 50 ಎಂಎಲ್ ಹೆಚ್ಚಿಗೆ ಕೊಟ್ಟಿದ್ದೇವೆ. 50 ಎಂಎಲ್ ಹಾಲಿಗೆ 2 ರೂ. 10 ಪೈಸೆ ಆಗುತ್ತದೆ. ಅದಕ್ಕೆ 2 ರೂ. ಮಾಡಿದ್ದೇವೆ. ಇದು ಹೇಗೆ ಬೆಲೆ ಏರಿಕೆಯಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.


ಬಿಜೆಪಿಯವರು ಹೇಳ್ತಾರೆ ಎಂದು ನೀವು, ಬೆಲೆ ಏರಿಕೆ ಆಗೋಯ್ತು ಎಂದು ಬರೆಯುತ್ತೀರಾ? ಹೊಟೇಲ್ ನವರು ಕಾಫಿ, ಟೀ ಮಾಡೋರು ಬೆಲೆ ಹೆಚ್ಚಳ ಮಾಡಿದ್ದಾರಾ? ಕಾಫಿ, ಟೀ ಬೆಲೆ ಹೆಚ್ಚಳ ಮಾಡಲು ಆಗುವುದಿಲ್ಲ. ಹಾಲಿನ ದರ ಹೆಚ್ಚಾಗಿಲ್ಲ ಎಂದು ಅವರು ಹೇಳಿದ್ದಾರೆ.



Join Whatsapp