ದುಶ್ಚಟಗಳಿಂದ ದೂರ ಮಾಡಿ ಉತ್ತಮ ಭವಿಷ್ಯ ರೂಪಿಸಲು ಕರೆ :ಆಸಿಫ್ ದಾರಿಮಿ

Prasthutha|

► ಕುಶಾಲನಗರದಲ್ಲಿ ಭವಿಷ್ಯದ ಚಿಂತನ ಮಂಥನ ಏಕದಿನ ಶಿಬಿರ

- Advertisement -

ಕುಶಾಲನಗರ : ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮೂಹವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಪ್ರತಿಭಾನ್ವಿತರನ್ನಾಗಿ ಸಿ ಭವಿಷ್ಯದ ಡೆಗೆ ಕೊಂಡೊಯ್ಯಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದ್ದು ಮಕ್ಕಳಿಂದ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಎಸ್ ಕೆ ಎಸ್ ಎಸ್ ಎಫ್ ಇಬಾದ ಸಮಿತಿ ರಾಜ್ಯ ಸಂಚಾಲಕ ಆಸಿಫ್ ದಾರಿಮಿ ಅಭಿಪ್ರಾಯಪಟ್ಟರು.


ಕೊಡಗು ಸಮಸ್ತ ಸುನ್ನಿ ಮಹಲ್ ಫೆಡರೇಶನ್ ಮತ್ತು ಜಂಇಯ್ಯತುಲ್ ಖುತಬಾಹ್ ಕೊಡಗು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ
ಕುಶಾಲನಗರ ದಾರುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ನಡೆದ ಭವಿಷ್ಯದ ಚಿಂತನ ಮಂಥನ ಏಕದಿನ ಶಿಬಿರದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಯುವ ಸಮೂಹ ದಾರಿ ತಪ್ಪುವುದರೊಂದಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಪ್ರೀತಿ ವಾತ್ಸಲ್ಯ ದೊಂದಿಗೆ ಮಕ್ಕಳಿಗೆ ಎಲ್ಲವನ್ನೂ ಕೊಡಿಸುವ ಪೋಷಕರು
ಮಕ್ಕಳ ಭವಿಷ್ಯದ ಕಡೆಗೆ ಜವಾಬ್ದಾರಿ ವಹಿಸಬೇಕಾಗಿದೆ. ಇಂದಿನ ಯುವಪೀಳಿಗೆ ಮಾದಕ ವ್ಯಸನಿಗಳಾಗಿ ದಾರಿ ತಪ್ಪುತ್ತಿದ್ದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರತಿ ಗ್ರಾಮದ ಮಹಲ್ ಗಳಲ್ಲಿ ಯುವ ಸಮೂಹವನ್ನು ಒಂದುಗೂಡಿಸಿ ಉತ್ತಮ ಭವಿಷ್ಯ ರೂಪಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದರು.

- Advertisement -


ಸಮಸ್ತ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಹಾಗೂ ಕೊಡಗು ಜಿಲ್ಲಾ ಉಪ ಖಾಝಿ ಎಂ. ಎಂ ಅಬ್ದುಲ್ಲಾ ಪೈಝಿ ಶಿಬಿರ ಉದ್ಘಾಟಿಸಿ ಮಾತನಾಡಿ ಸಮಸ್ತ ಸಂಘಟನೆ ದೇಶಾದ್ಯಂತ ಸಕ್ರಿಯವಾಗಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡುವ ಮೂಲಕ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದೆ. ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಸುಂದರ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದರು.


ಸುನ್ನಿ ಮಹಲ್ ಫೆಡರೇಶನ್ ಸಂಘಟನಾ ಕಾರ್ಯದರ್ಶಿ ಹಮೀದ್ ಮೌಲವಿ ಮಾತನಾಡಿ ಸಮಸ್ತ ಸುನ್ನಿ ಮಹಲ್ ಫೆಡರೇಶನ್ ಮತ್ತು ಜಂಇಯ್ಯತುಲ್ ಖುತಬಾಹ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ನಾನಾ ಭಾಗಗಳಲ್ಲಿರುವ 50 ಕ್ಕೂ ಹೆಚ್ಚು ಮಹಲ್ ಗಳ ಖತೀಬರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಶಿಬಿರ ಆಯೋಜಿಸಲಾಗಿದ್ದು ಗ್ರಾಮದಲ್ಲಿರುವ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವ ಮೂಲಕ ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ಒಂದುಗೂಡಿಸಿ ಮುಖ್ಯವಾಹಿನಿಗೆ ತರುವ ಪ್ರಯತ್ನ ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಸಲಹೆ ಮಾರ್ಗದರ್ಶನಗಳನ್ನು ನೀಡಲಾಗಿದೆ ಎಂದರು.


ಸುನ್ನಿ ಮಹಲ್ ಫೆಡರೇಶನ್ ನ ಅಧ್ಯಕ್ಷ ಅಹ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದಲ್ಲಿ ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಯಾಕೂಬ್,
ಎಸ್ ವೈಎಸ್ ಜಿಲ್ಲಾ ಅಧ್ಯಕ್ಷ ಸಿ. ಪಿ. ಎಂ ಬಶೀರ್ ಹಾಜಿ,ಸುನ್ನಿ ಮಹಲ್ ಫೆಡರೇಶನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ ಅಬ್ದುಲ್ ಕರೀಂ,ಸಿದ್ಧಾಪುರ ಖತೀಬ್ ನೌಫಲ್ ಹುದವಿ,ಕುಶಾಲನಗರದ ಹಿಲಾಲ್ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಪ್ರಮುಖರಾದ ಉಮ್ಮರ್ ಫೈಝಿ, ಉಸ್ಮಾನ್ ಫೈಝಿ, ಸೂಫಿ ದಾರಿಮಿ,ತಮ್ಲಿಕ್ ದಾರಿಮಿ,ಆರಿಫ್ ಫೈಝಿ ಸೇರಿದಂತೆ ವಿವಿಧ ಭಾಗದ ಆಡಳಿತ ಮಂಡಳಿಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಖತೀಬರು ಹಾಜರಿದ್ದರು.

Join Whatsapp