ಮೆಕ್ಸಿಕೋ ಗಾರ್ಡ್ ಹತ್ಯೆ ಖಂಡಿಸಿ ನಡೆದ ಜಾಥಾದಲ್ಲಿ ಪೊಲೀಸರೊಂದಿಗೆ ಸಂಘರ್ಷ: ಹಲವು ವಲಸಿಗರ ಬಂಧನ

Prasthutha|

ಮೆಕ್ಸಿಕೋ: ರಾಷ್ಟ್ರೀಯ ಗಾರ್ಡ್ ಏಜೆಂಟ್ ಗಳಿಬ್ಬರ ಹತ್ಯೆ ಖಂಡಿಸಿ ದಕ್ಷಿಣ ಮೆಕ್ಸಿಕೋದಲ್ಲಿ ನಡೆದ ಜಾಥಾದಲ್ಲಿ ಭದ್ರತಾ ಪಡೆ ಮತ್ತು ವಲಸಿಗರ ನಡುವೆ ಹೆದ್ದಾರಿಯಲ್ಲೇ ಘರ್ಷಣೆ ನಡೆದಿದ್ದು, ಆಕ್ರೋಶಿತ ಪ್ರತಿಭಟನಕಾರರು ಸೈನಿಕರಿಗೆ ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

- Advertisement -

ಹತ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನಾ ಜಾಥಾದಲ್ಲಿದ್ದ ವಲಸಿಗರು ಆಕ್ರೋಶಿತರಾಗಿ ಭದ್ರತಾ ಪಡೆಗಳೊಂದಿಗೆ ಘರ್ಷಣೆಗಿಳಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರತಿಭಟನೆಯ ವೇಳೆ ಉಪಸ್ಥಿತರಿದ್ದ ಪೊಲೀಸ್ ಅಧಿಕಾರಿಗಳು ಮಹಿಳೆಯರು ಮತ್ತು ಮಕ್ಕಳನ್ನು ವಶಕ್ಕೆ ಪಡೆದುಕೊಂಡಾಗ ನಡೆದ ಮಾತಿನ ಚಕಮಕಿ ನಂತರ ಉಂಟಾದ ಘರ್ಷಣೆಯಲ್ಲಿ ಹಲವಾರು ಭದ್ರತಾ ಪಡೆಯ ಸದಸ್ಯರು ಗಂಭೀರವಾಗಿ ಗಾಯಗೊಂಡರು. ಮಾತ್ರವಲ್ಲ ಈ ಸಂಬಂಧ ಇಪ್ಪತ್ತೈದು ವಲಸಿಗರನ್ನು ಬಂಧಿಸಲಾಯಿತು.

- Advertisement -

ಕ್ಯೂಬಾ ಮೂಲದ ವಲಸಿ ರಾಷ್ಟ್ರೀಯ ಗಾರ್ಡ್ ಏಜೆಂಟರನ್ನು ಹತ್ಯೆ ನಡೆಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ



Join Whatsapp