ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಮಗ ಝೈನ್ ನಿಧನ

Prasthutha|

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಅವರ ಮಗ ಝೈನ್ (26) ಮೃತಪಟ್ಟಿದ್ದಾರೆಂದು ಮೈಕ್ರೋಸಾಫ್ಟ್ ಕಾರ್ಪೊರೇಷನ್ ಮೂಲಗಳು ತಿಳಿಸಿದೆ.

- Advertisement -

ಹುಟ್ಟುವಾಗಲೇ ಸತ್ಯ ನಾಡೆಲ್ಲ ಮಗನಿಗೆ ಸೆರೆಬ್ರಲ್ ಪಾಲ್ಸಿ ಸಮಸ್ಯೆ ಇತ್ತು. ತನ್ನ ಸಿಬ್ಬಂದಿಗೆ ಇಮೇಲ್ ಮೂಲಕ ಝೈನ್ ನಿಧನದ ಬಗ್ಗೆ ಮೈಕ್ರೋಸಾಫ್ಟ್ ಮಾಹಿತಿ ನೀಡಿದೆ. ಈ ದುಃಖವನ್ನು ಭರಿಸುವುದಕ್ಕೆ ಕುಟುಂಬದ ಆಲೋಚನೆ ಮತ್ತು ಪ್ರಾರ್ಥನೆಗೆ ಖಾಸಗಿತನದ ಅವಶ್ಯಕತೆ ಇದ್ದು, ಅದಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.

2014ರಲ್ಲಿ ಸತ್ಯ ನಾಡೆಲ್ಲ ಮೈಕ್ರೋಸಾಫ್ಟ್ ನ ಸಿಇಒ ಹುದ್ದೆಯನ್ನು ಅಲಂಕರಿಸಿದ್ದರು.



Join Whatsapp