IPL 2022 | ಮುಂಬೈ ಬೆವರಿಳಿಸಿದ ‘ಬಟ್ಲರ್’: ಬೇಕಿದೆ 194ರನ್ ಗಳ ಚೇಸ್!

Prasthutha|

ಮುಂಬೈ: ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 15ನೇ ಆವೃತ್ತಿಯ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ರಾಜಸ್ಥಾನ 193 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ, ಮುಂಬೈ ಬೌಲರ್’ಗಳ ಬೆವರಿಳಿಸಿದ ಜಾಸ್ ಬಟ್ಲರ್, ಈ ಆವೃತ್ತಿಯ ಮೊದಲನೆ ಶತಕ ಸಿಡಿಸಿದರು. ರಾಜಸ್ಥಾನ ರಾಯಲ್ಸ್ 20 ಓವರ್‌’ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 193 ರನ್‌ಗಳನ್ನು ಕಲೆಹಾಕಿತು.

- Advertisement -

66 ಎಸೆತಗಳಲ್ಲಿ ಐದು ಸಿಕ್ಸರ್, 11 ಫೋರ್ ನೆರವಿನಿಂದ ಶತಕ ಭಾರಿಸಿದ ಜಾಸ್ ಬಟ್ಲರ್ ಐಪಿಎಲ್ ಆವೃತ್ತಿಯಲ್ಲಿ ಒಟ್ಟು ಎರಡು ಶತಕವನ್ನು ಸಿಡಿಸಿದರು. ರಾಜಸ್ಥಾನ್ ಪರವಾಗಿ ನಾಯಕ ಸಂಜು ಸ್ಯಾಮ್ಸನ್ 30ರನ್, ಹಿಟ್ಮೇಯರ್ 35ರನ್ ಕಲೆಹಾಕಿದರು.

Join Whatsapp