ಎಮ್ ಜಿ ಹೆಗ್ಡೆಯವರನ್ನು ಭೇಟಿ ಮಾಡಿ ನೈತಿಕ ಬೆಂಬಲ ವ್ಯಕ್ತಪಡಿಸಿದ ಮಂಗಳೂರಿನ ಸಮಾನ ಮನಸ್ಕರು

Prasthutha|

ಮಂಗಳೂರು: ಮಾಧ್ಯಮಗಳ ಕೋಮುವಾದಿ ಮನಸ್ಥಿತಿಯ ವಿರುದ್ಧ ಧ್ವನಿ ಎತ್ತಿದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಎಮ್ ಜಿ ಹೆಗ್ಡೆಯವರನ್ನು ಗುರಿಯಾಗಿಸಿ ಬಲಪಂಥೀಯ ಕೋಮುಶಕ್ತಿಗಳು ದ್ವೇಷ ಸಾಧನೆಯ ದಾಳಿಯನ್ನು ಸಂಘಟಿಸಿವೆ. ಉಡುಪಿಯಲ್ಲಿ ಶಾಸಕ ಯಶಪಾಲ್ ಸುವರ್ಣರ ನೇತೃತ್ವದಲ್ಲಿ ಎಮ್ ಜಿ ಹೆಗ್ಡೆಯವರ ವಿರುದ್ದ ಅಸಭ್ಯ ರೀತಿಯ ಪ್ರತಿಭಟನೆಯನ್ನು ನಡೆಸಿ ದೈಹಿಕ ದಾಳಿಗೆ ಪ್ರಚೋದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು ಎಮ್ ಜಿ ಹೆಗ್ಡೆಯವರನ್ನು ಭೇಟಿ ಮಾಡಿ ನೈತಿಕ ಬೆಂಬಲ ವ್ಯಕ್ತಪಡಿಸಿದರು.

- Advertisement -

ಎಮ್ ಜಿ ಹೆಗ್ಡೆಯವರನ್ನು ಬೆದರಿಸುತ್ತಿರುವ ಶಕ್ತಿಗಳ ಮೇಲೆ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು, ಎಮ್ ಜಿ ಹೆಗ್ಡೆಯವರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಲಾಯಿತು.

ಸಮಾನ ಮನಸ್ಕರ ವೇದಿಕೆಯ ಮುನೀರ್ ಕಾಟಿಪಳ್ಳ, ಕರ್ನಾಟಕ ಪ್ರಾಂತ ರೈತ ಸಂಘದ ಕೆ ಯಾದವ ಶೆಟ್ಟಿ, ದಲಿತ ನಾಯಕ ಎಂ ದೇವದಾಸ್, ಹಿರಿಯ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯ ದ ಮಂಜುಳಾ ನಾಯಕ್, ಡಿವೈಎಫ್ಐ ನಾಯಕ ಸಂತೋಷ್ ಬಜಾಲ್, ಸಮುದಾಯದ ಮನೋಜ್ ವಾಮಂಜೂರು, ಸಾಮಾಜಿಕ ಕಾರ್ಯಕರ್ತರಾದ ಸ್ಟಾನಿ ಆಳ್ವಾರಿಸ್, ನಿತಿನ್ ಬಂಗೇರ, ಸಮರ್ಥ್ ಭಟ್ ಉಪಸ್ಥಿತರಿದ್ದರು.



Join Whatsapp