ಭಾರೀ ಮಳೆಯ ಮುನ್ಸೂಚನೆ ನೀಡಲು ಹವಾಮಾನ ಇಲಾಖೆ ವಿಫಲ: ಎಂ.ಕೆ.ಸ್ಟಾಲಿನ್

Prasthutha|

ಚೆನ್ನೈ: ಹವಾಮಾನ ಇಲಾಖೆಯು ಸಾಮಾನ್ಯವಾಗಿ ಮಳೆಯಾಗುವ ಸಾಧ್ಯತೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಆದರೆ ಭಾರೀ ಮಳೆಯಾಗುವ ಬಗ್ಗೆ ಯಾವುದೇ ಮುನ್ಸೂಚನೆ ನೀಡಲು ಸಾಧ್ಯವಾಗಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

- Advertisement -

ಚೆನ್ನೈನ ಹಲವು ಪ್ರದೇಶಗಳಲ್ಲಿ ಗುರುವಾರ ಸುಮಾರು 20 ಸೆಂ.ಮೀ. ಗಿಂತಲೂ ಹೆಚ್ಚು ಮಳೆಯಾಗಿದ್ದು, ಜಲಾವೃತಗೊಂಡ ಪ್ರದೇಶಗಳಲ್ಲಿ ಹೆವಿ ಡ್ಯೂಟಿ ಮೋಟಾರ್‌ ಗಳನ್ನು ಬಳಸಿಕೊಂಡು ನೀರನ್ನು ಹೊರಹಾಕಲಾಗಿದೆ. ಎಐಎಡಿಎಂಕೆ ಆಡಳಿತದಲ್ಲಿದ್ದಾಗ ಮೂಲಸೌಕರ್ಯಗಳನ್ನು ಬಲಪಡಿಸುವುದು ಮತ್ತು ಮಳೆ ನೀರು ನಿಲ್ಲುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. 

Join Whatsapp